ಮೈಸೂರು

ಡೆಂಗ್ಯೂ ಜ್ವರ: ಮಣಿಪಾಲದ ಪ್ರಯೋಗಾಲಯಕ್ಕೆ ರಕ್ತದ ಮಾದರಿಗಳು

ಮೈಸೂರು,ಜೂ.22-ನಗರದ ಚೆಲುವಾಂಬ ಆಸ್ಪತ್ರೆಗೆ ಗುರುವಾರ ಭೇಟಿ ನೀಡಿದ ಜಿಲ್ಲಾ ಆರೋಗ್ಯ ಅಧಿಕಾರಿ ಬಸವರಾಜು ಡೆಂಗ್ಯೂ ಜ್ವರಕ್ಕೆ ಒಳಗಾಗಿರುವ ರೋಗಿಗಳ ಆರೋಗ್ಯ ವಿಚಾರಿಸಿದರು.

ನಂತರ ನಡೆಸಿದ ಸಭೆ ನಡೆಸಿದ ಅವರು, ಜ್ವರದಿಂದ ಸಾಕಷ್ಟು ಮಂದಿ ಚೆಲುವಾಂಬ ಆಸ್ಪತ್ರೆಗೆ ದಾಖಲಾಗಿದ್ದು, ಅವರ ರಕ್ತದ ಮಾದರಿಗಳನ್ನು ಸಂಗ್ರಹಿಸಿ ಡೆಂಗ್ಯೂ ಪರೀಕ್ಷೆ ಮಾಡಿದಾಗ ವರದಿಯಲ್ಲಿ ಡೆಂಗ್ಯೂ ಇಲ್ಲ ಎಂದು ಬರುತ್ತಿದೆ. ಆದರೆ ಡೆಂಗ್ಯೂ ಲಕ್ಷಣಗಳ ರೀತಿಯಲ್ಲೇ ಇದು ಬೇರೆ ವೈರಸ್ ಆಗಿರಬಹುದು ಎಂಬ ಕಾರಣಕ್ಕೆ ರೋಗಿಗಳ ರಕ್ತದ ಮಾದರಿಗಳನ್ನು ಮಣಿಪಾಲದ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಜ್ವರದಿಂದ ಮೃತಪಟ್ಟಿರುವವರ ರಕ್ತದ ಮಾದರಿಗಳನ್ನು ಸಹ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗುತ್ತಿದ್ದು, ಸದ್ಯಕ್ಕೆ 5 ರಕ್ತದ ಮಾದರಿಗಳನ್ನು ಮಣಿಪಾಲದ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗುತ್ತಿದ್ದು, ಈ ಬಗ್ಗೆ ಪ್ರಯೋಗಾಲಯದ ಪ್ರೊಫೆಸರ್ ಅವರೊಂದಿಗೆ ಮಾತನಾಡಿದ್ದೇವೆ. 2-3 ದಿನಗಳಲ್ಲಿ ರಕ್ತದ ಮಾದರಿಯನ್ನು ಕಳುಹಿಸಿಕೊಡಲಾಗುವುದು. ಅಲ್ಲಿಂದ ವರದಿ ಬಂದ ನಂತರ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಡಿಎಚ್ಒ ಬಸವರಾಜು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ರಾಷ್ಟ್ರೀಯ ಆಶ್ರಿತ ರೋಗಿಗಳ ನಿರ್ಮೂಲನಾಧಿಕಾರಿ ಚಿದಂಬರ, ನಗರಪಾಲಿಕೆ ಆರೋಗ್ಯಾಧಿಕಾರಿ ಡಾ.ರಾಮಚಂದ್ರ, ಚೆಲುವಾಂಬದ ಮಕ್ಕಳ ವಿಭಾಗದ ಮುಖ್ಯಸ್ಥೆ ಸುಧಾ ರುದ್ರಪ್ಪ, ಮೆಡಿಕಲ್ ಕಾಲೇಜಿನ ನಿರ್ದೇಶಕ ಡಾ.ಬಿ.ಕೃಷ್ಣಮೂರ್ತಿ, ಪ್ರೊ.ಅನುರಾಧ ಇತರರು ಉಪಸ್ಥಿತರಿದ್ದರು. (ವರದಿ-ಎಚ್.ಎನ್, ಎಂ.ಎನ್)

 

 

 

 

Leave a Reply

comments

Related Articles

error: