ಮೈಸೂರು

ಜೂ.25ರಂದು ವಾಲ್ಮೀಕಿ ಸಾಹಿತ್ಯ ವಿಚಾರ ಸಂಕಿರಣ

ಮೈಸೂರು.ಜೂ.22 : ಕರ್ನಾಟಕ ರಾಜ್ಯ ನಾಯಕರ ಹಿತರಕ್ಷಣಾ ವೇದಿಕೆಯಿಂದ ಜೂ.25ರ ಮಹರ್ಷಿ ವಾಲ್ಮೀಕಿ ಸಾಹಿತ್ಯ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ ಎಂದು ವೇದಿಕೆಯ ರಾಜ್ಯಾಧ್ಯಕ್ಷ ದ್ಯಾವಪ್ಪ ನಾಯಕ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಗುರುವಾರ, ಪತ್ರಕರ್ತರ ಭವನದಲ್ಲಿ ಮಾತನಾಡಿ ಅಂದು ಬೆಳಿಗ್ಗೆ 10ಕ್ಕೆ, ಜೆ.ಎಲ್.ಬಿ. ರಸ್ತೆಯ ರೋಟರಿ ಸಭಾಂಗಣದಲ್ಲಿ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಟಿ.ಟಿ.ಬಸವನಗೌಡ ಕಾರ್ಯಕ್ರಮ ಉದ್ಘಾಟಿಸುವರು. ರಾಧಕೃಷ್ಣ ಶಿಕ್ಷಣ ಸಂಸ್ಥೆ ನಿರ್ದೇಶಕ ಡಾ.ಕೃಷ್ಣಸ್ವಾಮಿ ನಾಯಕ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು.

ವಿಚಾರ ಗೋಷ್ಠಿಗಳು : ಬೆಳಿಗ್ಗೆ 11ಕ್ಕೆ ಹೊಸಪೇಟೆ ರಂಗಕರ್ಮಿ ಡಾ.ನಾಗರತ್ನಮ್ಮ ಅಧ್ಯಕ್ಷತೆಯಲ್ಲಿ ನಡೆಯುವ ಗೋಷ್ಠಿಯಲ್ಲಿ ಮೈಸೂರು ವಿವಿಯ ಡಾ.ಎಸ್.ಎಸ್. ಮಾಲಿನಿ, ‘ವಾಲ್ಮೀಕಿ ಮತ್ತು ಭಾರತ ದೇಶ’, ಹಾಸನದ ಬಿ.ಸಿ.ಭೈರಪ್ಪ, ರಾಮಾಯಣ ಮತ್ತು ಸ್ತ್ರೀ ಸಾಮಾಜಿಕ ಚಿಂತನೆ, ನಂತರ ರಾಮಾಯಣ ಮತ್ತು ತಳ ಸಮುದಾಯದ ಬಗ್ಗೆ ಜಿ.ಎನ್.ದೇವದತ್ತ ಮಾತನಾಡುವರು.

ಮಧ್ಯಾಹ್ನ 2ಕ್ಕೆ ಡಾ.ಮಂಜುನಾಥ್ ಅಧ್ಯಕ್ಷತೆಯಲ್ಲಿ ನಡೆಯುವ 2ನೇ ಗೋಷ್ಠಿಯಲ್ಲಿ ಮಹರ್ಷಿ ವಾಲ್ಮೀಕಿ ಜೀವನ ಚರಿತ್ರೆ ವಿಷಯವಾಗಿ ಹಂಪಿ ಕನ್ನಡ ವಿವಿಯ ಡಾ.ತಾರಿಹಳ್ಳಿ ಹನುಮಂತಪ್ಪ ಹಾಗೂ ಇತರರು ಪಾಲ್ಗೊಂಡು ಉಪನ್ಯಾಸ ನೀಡುವರು ಎಂದು ತಿಳಿಸಿದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಭಾಕರ್ ಹುಣಸೂರು, ಜಿಲ್ಲಾಧ್ಯಕ್ಷ ಶ್ರೀಧರ್ ಮೂರ್ತಿ, ತಿಮ್ಮಾನಾಯಕ, ಶಿವಪ್ರಕಾಶ್.ಎಂ, ವಿನೋದ್ ನಾಗವಾಲ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: