ಪ್ರಮುಖ ಸುದ್ದಿ

ದರೋಡೆ ಪ್ರಕರಣ: ಓರ್ವನ ಬಂಧನ

ರಾಜ್ಯ, (ಚಾಮರಾಜನಗರ) ಜೂ.22: ಯುವತಿಯೋರ್ವಳನ್ನು ಅಡ್ಡಗಟ್ಟಿ ಮೊಬೈಲ್ ಕಸಿದು ಪರಾರಿಯಾಗಿದ್ದವನನ್ನು ಸಂತೆಮರಳ್ಳಿ ಪೊಲೀಸರು ಬಂಧಿಸಿದ್ದಾರೆ.

ಮೇಗಲಹುಂಡಿಯಿಂದ ಸಪ್ಪಯ್ಯನಪುರ ಗ್ರಾಮಕ್ಕೆ ಹೋಗುವ ಮಾರ್ಗಮಧ್ಯೆ ಯುವತಿಯನ್ನು ಅಡ್ಡ ಹಾಕಿ‌ ಮೊಬೈಲ್  ಕಸಿದು‌ ಪರಾರಿಯಾಗಿದ್ದನು. ಈ ಪ್ರಕರಣ  ಕಳೆದ ತಿಂಗಳ 30 ರಂದು ನಡೆದಿದ್ದು, ಠಾಣೆಯಲ್ಲಿ ಯುವತಿ ದೂರು ದಾಖಲಿಸಿದ್ದಳು. ಪ್ರಕರಣ ದಾಖಲಿಸಿಕೊಂಡ ಇನ್ಸ್ ಪೆಕ್ಟರ್ ರಾಜೇಂದ್ರ ಅವರು ಆರೋಪಿಗಾಗಿ‌ ವ್ಯಾಪಕ ಜಾಲ ‌ಬೀಸಿದ್ದರು. ಇದೀಗ ಆರೋಪಿ ಸಿಕ್ಕಿಬಿದ್ದಿದ್ದಾನೆ.

ಸಬ್ ಇನ್ಸ್ ಪೆಕ್ಟರ್ ಬಸವರಾಜು, ಪೊಲೀಸ್ ಪೇದೆ ಬಾಬು ಸೇರಿದಂತೆ ತಂಡವು  ಶ್ರಮವಹಿಸಿ ಆರೋಪಿಯನ್ನು ಬಂಧಿಸಿದ್ದಾರೆ.  ಕೃತ್ಯಕ್ಕೆ ಬಳಸಲಾಗಿದ್ದ ವಾಹನವೂ‌ ಸಹ ಕಳ್ಳತನದ್ದಾಗಿದ್ದು, ಈಗ ಎರಡು ಬೈಕ್  ಮತ್ತು  ಮೊಬೈಲ್ ಅನ್ನು ವಶಪಡಿಸಿಕೊಂಡಿದ್ದಾರೆ. (ವರದಿ: ಆರ್.ಎಸ್.ವಿ, ಎಲ್.ಜಿ )

Leave a Reply

comments

Related Articles

error: