ಮೈಸೂರು

ಕಾಂಗ್ರೆಸ್ ಕಿಸಾನ್ ಘಟಕದ ಪದಾಧಿಕಾರಿಗಳ ಪದಗ್ರಹಣ

ಮೈಸೂರು, ಜೂ.೨೨: ನಗರ(ಜಿಲ್ಲಾ) ಕಾಂಗ್ರೆಸ್ ಸಮಿತಿ ಕಿಸಾನ್ ಕೇತ್ ಮಜ್ದೂರ್ ಕಾಂಗ್ರೆಸ್ ಘಟಕದ ಕಾರ್ಯಾಧ್ಯಕ್ಷರಾಗಿ ನಾಗೇಂದ್ರ ಗುರುವಾರ ಅಧಿಕಾರ ಸ್ವೀಕರಿಸಿದರು.
ನಗರದ ಶಿವರಾಂಪೇಟೆ ಮುಖ್ಯರಸ್ತೆಯ ಕಲ್ಯಾಣ ಮಂಟಪದಲ್ಲಿ ನಡೆದ ಪದಗ್ರಹಣ ಸಮಾರಂಭದಲ್ಲಿ ಕಿಸಾನ್ ಘಟಕದ ನೂತನ ಪಧಾಧಿಕಾರಿಗಳಿಗೆ ಪಕ್ಷದ ಧ್ವಜ ಹಿಡಿಸುವ ಮೂಲಕ ಅಧಿಕಾರವಹಿಸಲಾಯಿತು. ರಾಜ್ಯ ಕಾರ್ಯಾದರ್ಶಿಯಾಗಿ ಎಸ್ ಸುಹಾಸ್, ನಗರಾಧ್ಯಕ್ಷರಾಗಿ ಎನ್.ನಾಗೇಂದ್ರ, ನಗರ ಪದಾಧಿಕಾರಿಗಳಾಗಿ ಕಮಲೇಶ್ ಕವಾಡ್, ಆನಂದ್, ಪರಶಿವಮೂರ್ತಿ ಹಾಗೂ ವಡಿವೇಲನ್ ಅಧಿಕಾರ ಸ್ವೀಕರಿಸಿದರು. ರೈತರ ಪರವಾಗಿದ್ದೀವಿ ಎಂದು ಮುಖ್ಯಮಂತ್ರಿಗಳು ಸಾಲಮನ್ನಾ ಮಾಡುವ ಮೂಲಕ ತೋರಿಸಿಕೊಟ್ಟಿದ್ದಾರೆ. ರೈತರಿಗೆ ಸಿಹಿತಿನಿಸಿ ಗಿಡ ವಿತರಿಸಿ ಸಂಭ್ರಮಾಚರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಶಾಸಕ ವಾಸು, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ಜೆ.ವಿಜಯ್‌ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. (ವರದಿ ಬಿ.ಎಂ)

Leave a Reply

comments

Related Articles

error: