ಕರ್ನಾಟಕ

ಚಾ.ನಗರ ನಗರಸಭಾ ಆಯುಕ್ತ ವಿರುದ್ಧ ಲೋಕಾಯುಕ್ತಕ್ಕೆ ದೂರು

ಚಾಮರಾಜನಗರ,ಜೂ.22-ನಗರಸಭಾ ಮಾಜಿ ಅಧ್ಯಕ್ಷೆ ರೇಣುಕಾ ಅವರು ನಗರಸಭಾ ಆಯುಕ್ತ ರಾಜಣ್ಣ ಅವರ ವಿರುದ್ಧ ಭ್ರಷ್ಟಾಚಾರ ಹಾಗೂ ಕರ್ತವ್ಯ ಲೋಪದಡಿ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ.

ಏಪ್ರಿಲ್ 3 ರಿಂದ 26 ರವರೆಗೆ ನಗರಸಭಾ ಅಧ್ಯಕ್ಷರು ಇಲ್ಲದಿರುವ ಸಮಯದಲ್ಲಿ 1.25 ಕೋಟಿ ಮೊತ್ತದ ಬಿಲ್ ಗಳನ್ನು ಸ್ವ ನಿರ್ಧಾರದ ಮೇಲೆ ಪಾವತಿ ಮಾಡಿಕೊಂಡಿದ್ದಾರೆ. ಸಂಬಂಧಪಟ್ಟ ಕಡತಗಳಿಗೆ ಆಡಳಿತಾಧಿಕಾರಿಯಾದ ಜಿಲ್ಲಾಧಿಕಾರಿ ಅವರ ಸಹಿ ಇಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಆಯುಕ್ತರು ರಾಜಣ್ಣ, ನನಗೆ ಅದರ ಬಗ್ಗೆ ಗೊತ್ತಿಲ್ಲ‌ ತನಿಖೆ ಎದುರಿಸಲು ಸಿದ್ಧ ಎಂದಿದ್ದಾರೆ. (ವರದಿ-ವಿ.ಎಸ್.ಎಸ್., ಎಂ.ಎನ್)

Leave a Reply

comments

Related Articles

error: