ಮೈಸೂರು

ಛಲ ಇದ್ದಲ್ಲಿ ಮಾತ್ರ ಸಾಧನೆ ಸಾಧ್ಯ : ಡಾ.ಆರ್.ಡಿ.ಕುಮಾರ್

ಮೈಸೂರು,ಜೂ.22:-  ಲಯನ್ಸ್ ಕ್ಲಬ್ ಆಫ್ ಇಂಟರ್ ನ್ಯಾಷನಲ್, ಲಯನ್ಸ್ ಕ್ಲಬ್ ಆಫ್ ಮೈಸೂರು ತನ್ನ ನೂರನೇ ವರ್ಷದ ಸಂಭ್ರಮಾಚರಣೆ ಕಾರ್ಯಕ್ರಮ ಏರ್ಪಡಿಸಿತ್ತು.
ನಗರದ ಖಾಸಗಿ ಹೋಟೆಲೊಂದರಲ್ಲಿ ಆಯೋಜಿಸಿದ ಕಾರ್ಯಕ್ರಮವನ್ನು ಡೈರೆಕ್ಟರ್ ಅನಂತ ಕುಮಾರ್ ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ವಕೀಲ ಡಾ.ಆರ್.ಡಿ.ಕುಮಾರ್ ಮಾತನಾಡಿ ಲಯನ್ಸ್ ಕ್ಲಬ್ ಆಫ್ ಮೈಸೂರು ಸ್ಥಾಪನೆಯಾಗಿ ಸುಮಾರು 30 ವರ್ಷಗಳನ್ನು ಪೂರೈಸಿದೆ. ಅಲ್ಲದೇ 29 ಹಾಗೂ 30 ನೇ ವರ್ಷದ ಅವಧಿಯಲ್ಲಿ ಈ ಕ್ಲಬ್ ಗೆ ನಾನು ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದ್ದೇನೆ. ಇಂದು ನನ್ನ ಅಧಿಕಾರದ ಅವಧಿ ಮುಗಿದಿದೆ.  ಇದ್ದಂತಹ ಅಷ್ಟು ವರ್ಷವೂ ಕೂಡ 28 ಜನ ಸದಸ್ಯರು ಕೈ ಹಿಡಿದು ಸಹಕರಿಸಿದ್ದಾರೆ. ನಾವು ಸಂವಿಧಾನವನ್ನು ಏನು ಓದಿ ಕಲಿತಿದ್ದೆವೋ ಅದನ್ನು ಬಳಸಿಕೊಂಡು ಸಮಾಜಕ್ಕೆ ಏನನ್ನಾದರೂ ಕೊಡುಗೆಯಾಗಿ ನೀಡಬೇಕು. ಒಬ್ಬ ವ್ಯಕ್ತಿಗೆ ದೇಶಕ್ಕೆ ಏನಾದರೂ ಮಾಡಬೇಕೆಂಬ ಛಲ ಇರಬೇಕು ಆಗ ಮಾತ್ರ ಸಾಧನೆ ಸಾಧ್ಯ. ಈ ಕ್ಲಬ್ ಪ್ರಪಂಚಕ್ಕೆ ಜಿಲ್ಲೆಗೆ ಮನುಕುಲದ ಏಳಿಗೆಗಾಗಿ ಶ್ರಮಿಸುತ್ತಿದೆ ಎಂದರು. ಇದೇ ಸಂದರ್ಭ ಸಾಧಕರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ವಕೀಲರಾದ ಲತಾ ಅನಂತ ಕುಮಾರ್, ಪಟಾನ್ ಕುಮಾರ್, ವಿರೋಪಾಕ್ಷ ಹಾಗೂ ಕ್ಲಬಿನ ಸದಸ್ಯರು ಹಾಜರಿದ್ದರು.   (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: