ಕರ್ನಾಟಕಪ್ರಮುಖ ಸುದ್ದಿ

ಕೆರೆಗೆ ಎತ್ತಿನಗಾಡಿ ಬಿದ್ದು ರೈತ ಮಹಿಳೆ ಸಾವು

ರಾಜ್ಯ(ಮಂಡ್ಯ)ಜೂ.22:- ಕೆರೆಗೆ ಎತ್ತಿನಗಾಡಿ ಬಿದ್ದು ರೈತ ಮಹಿಳೆಯೋರ್ವರು  ಸಾವನ್ನಪ್ಪಿದ್ದು, ಮಗುವಿಗೆ ಗಂಭೀರ ಗಾಯಗೊಂಡಿರು ಘಟನೆ ನಡೆದಿದೆ.

ಮೃತರನ್ನು ಶಿವಪುರ ಗ್ರಾಮದ ಭಾಗ್ಯಮ್ಮ (40)  ಎಂದು ಗುರುತಿಸಲಾಗಿದೆ. ಮಂಡ್ಯ ತಾಲೂಕಿನ ಶಿವಪುರ  ಕೆರೆಯ ಏರಿ ಮೇಲೆ ಘಟನೆ ನಡೆದಿದ್ದು, ಗಾಯಗೊಂಡ ಮಗುವನ್ನು ಮದ್ದೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆರೆ ಏರಿ ದುರಸ್ತಿ‌ ಮಾಡಿಸದ ಕಾರಣದಿಂದ ಈ ಅವಘಡ  ನಡೆದಿದ್ದು, ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಸರಾಳು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: