ಮೈಸೂರು

ಜಿ.ಎಸ್.ಟಿ ಗೆ ಪೂರಕವಾದ ಕುಬೇರ್ ಆ್ಯಪ್ ಬಿಡುಗಡೆ

ಮೈಸೂರು.ಜೂ,22: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಜಿಎಸ್ ಟಿ ಗೆ ಪೂರಕವಾಗಿ ಮಂಡ್ಯದ ಪಿಇಎಸ್ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ಸಂಶೋಧನೆ ಮಾಡಿರುವ ವಿಶ್ವದಲ್ಲೇ ಅತಿ ಅಗ್ಗದ ‘ಕುಬೇರ್’ ಆ್ಯಪ್  ಅನ್ನು ನಗರದಲ್ಲಿ ಬಿಡುಗಡೆಗೊಳಿಸಲಾಯಿತು.

ಗುರುವಾರ ಪತ್ರಕರ್ತರ ಭವನದಲ್ಲಿ ಆಪ್ ಬಿಡುಗಡೆಗೊಳಿಸಿದ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಪ್ರಾಧ್ಯಾಪಕ ಡಾ.ಆರ್.ಗಿರೀಶ ಅವರು ಆಫ್ ನ ಕಾರ್ಯ ಚಟುವಟಿಕೆ ಕುರಿತು ಮಾಹಿತಿ ನೀಡಿದರು.

ವಿಶ್ವದಲ್ಲೇ ಅತಿ ಅಗ್ಗದ ಈ ಆ್ಯಪ್ ನ್ನು  ಜಿ.ಎಸ್.ಟಿ. ಗೆ ಪೂರಕವಾಗಿ ರೂಪಿಸಲಾಗಿದ್ದು, ಜಿ.ಎಸ್.ಟಿ ಮತ್ತು ಅಕೌಂಟ್ ಅರಿವಿಲ್ಲದ ಸಾಮಾನ್ಯರು ಸಹ ಬಳಸಬಹುದು. ಪ್ರಾದೇಶಿಕ ಭಾಷೆಗಳ ಮೂಲಕ ವ್ಯವಹರಿಸಲು ಸಹಾಯಕಾಗಿದೆ. 79 ಕ್ಕೂ ಅಧಿಕ ಉದ್ದಿಮೆ ವ್ಯವಹಾರಗಳಿಗೆ ಪೂರಕ, ಉದ್ಯಮ ಮಾರ್ಗದರ್ಶಿಯಾಗಿದೆ.  ಎಸ್.ಎಂ.ಎಸ್, ವಾಟ್ಸಾಪ್, ಈ-ಮೇಲ್ ಮೂಲಕ  ಬಿಲ್, ಇನ್ ವಾಯ್ಸ್, ಎಸ್ಟಿಮೇಟ್ ಕಳುಹಿಸಲು ನೆರವಾಗಲಿದೆ ಎಂದರು.

ಸ್ಮಾರ್ಟ್ ಫೋನ್ ಕ್ಯಾಮರಾ ಮೂಲಕ ಬಾರ್ ಕೋಡ್ ಸ್ಕ್ಯಾನರ್, ಪ್ರಿಂಗರ್ ಪ್ರಿಂಟ್ , ಪೀನ್ ಅಥವಾ ಪಾಸ್ ವರ್ಡ್ ಮೂಲಕ ಆಫ್ ಅನ್ನು ಸುರಕ್ಷಿತವಾಗಿಡಬಹುದು. ಕ್ಲೌಡ್ ಮೂಲಕ ದತ್ತಾಂಶಗಳ ಶೇಖರಣೆ ಮಾಹಿತಿ ವಿಶ್ಲೇಷಣೆಗೆ ನೆರವಾಗಲಿದೆ ಎಂದು ತಿಳಿಸಿದರು.

ಸದಸ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಆ್ಯಪ್ ಗಳ ಪೈಕಿ ಕುಬೇರ ಅತ್ಯಂತ ಅಗ್ಗವಾಗಿದ್ದು ಆಧುನಿಕತೆಯಿಂದ ಕೂಡಿದೆ. ಸದ್ಯ ಇದರ ಬೆಲೆ ವರ್ಷಕ್ಕೆ 999 ರೂ. ನಿಂದ 4,999 ರೂ ವರೆಗೆ ಇದ್ದು,  ತಿಂಗಳಿಗೆ 99 ರಿಂದ 499ರ ರೂ.ವರೆಗೆ ಆಗಲಿದೆ. ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿರುವ ಈ ಆ್ಯಪ್ ಅನ್ನು www.kuberasofttech.com ಡೌನ್ ಲೋಡ್ ಮಾಡಿಕೊಳ್ಳಬಹುದು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಜಿ.ಸಿ.ಶೈಲಜಾ, ಜಿ.ರಾಕೇಶ್, ಐಸಿಎಐ ಮಾಜಿ ಅಧ್ಯಕ್ಷ ಸಿ.ಎ ಪಂಪಣ್ಣ, ಬೆಂಗಳೂರು ಬಿಐಟಿ ಇಂಜಿನಿಯರಿಂಗ್ ಕಾಲೇಜಿನ ಪ್ರೊ.ವಿದ್ಯಾಶಂಕರ್ ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: