ಕರ್ನಾಟಕ

ಇಂದಿರಾ ಕ್ಯಾಂಟೀನ್ ಆರಂಭಕ್ಕೆ ಬಿಬಿಎಂಪಿ ಭರದ ಸಿದ್ಧತೆ

ರಾಜ್ಯ(ಬೆಂಗಳೂರು)ಜೂ.22:- ನಗರದಲ್ಲಿ ಇಂದಿರಾ ಕ್ಯಾಂಟೀನ್ ಆರಂಭಕ್ಕೆ ಬಿಬಿಎಂಪಿ ಭರದ ಸಿದ್ಧತೆ ನಡೆಸಿದೆ.  ಮೊದಲ ಕ್ಯಾಂಟೀನ್‌ನ್ನು ಸಜ್ಜುಗೊಳಿಸಲು ಚೆನ್ನೈ ನಗರದಿಂದ ಸಲಕರಣೆಗಳು ಗುರುವಾರ ಸಂಜೆ ನಗರ ತಲುಪಲಿದೆ.
ಮೇಯರ್ ಪದ್ಮಾವತಿ ಅವರು ಪ್ರತಿನಿಧಿಸುವ ಪ್ರಕಾಶ್ ನಗರ ವಾರ್ಡ್‌ನಲ್ಲಿನ ಗಾಯಿತ್ರಿ ದೇವಾಲಯ ಹಿಂಭಾಗದಲ್ಲಿ ಇಂದಿರಾ ಕ್ಯಾಂಟೀನ್‌ಗೆ ಸ್ಥಳವನ್ನು ಗುರುತಿಸಲಾಗಿದ್ದು, ನಾಳೆಯಿಂದಲೇ ಸಲಕರಣೆಗಳ ಜೋಡಣಾ ಕಾರ್ಯ  ಆರಂಭವಾಗಲಿದೆ.
ಚೆನ್ನೈನಿಂದ 10ಕ್ಕೂ ಹೆಚ್ಚು ಮಂದಿ ಸಿಬ್ಬಂದಿಗಳು ನಗರಕ್ಕೆ ಆಗಮಿಸಿದ್ದು, ಇಡೀ ಕ್ಯಾಂಟೀನ್‌ನ್ನು ಸಲಕರಣೆಗಳಿಂದ ಜೋಡಣೆ ಮಾಡಲಿದ್ದಾರೆ.
ಕ್ಯಾಂಟೀನ್ ರೂಪಕ್ಕೆ ತರಲು 4 ದಿನಗಳು ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಪ್ರಾಯೋಗಿಕವಾಗಿ ಈ ಜೋಡಣಾ ಕಾರ್ಯ ಆರಂಭವಾಗಲಿದ್ದು, ಇದು ಯಶಸ್ವಿಯಾಗಲಿದೆ, 198 ವಾರ್ಡ್‌ಗಳಲ್ಲಿ ಮುಂದಿನ ಒಂದೂವರೆ ತಿಂಗಳಲ್ಲಿ ಇಂದಿರಾ ಕ್ಯಾಂಟೀನ್‌ಗೆ ಸಲಕರಣೆ ಜೋಡಣಾ ಪೂರ್ಣಗೊಳ್ಳಲಿದೆ. ಆಗಸ್ಟ್ 15 ರಂದು ಇಂದಿರಾ ಕ್ಯಾಂಟೀನ್ ಎಲ್ಲಾ ವಾರ್ಡ್‌ಗಳಲ್ಲಿ ಏಕಕಾಲದಲ್ಲಿ ಆರಂಭಗೊಳ್ಳಲಿವೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: