ಕ್ರೀಡೆ

ಯಾರಿಗೂ ಕುಂಬ್ಳೆ ಸ್ಥಾನ ತುಂಬಲು ಸಾಧ್ಯವಿಲ್ಲ: ಸೆಹ್ವಾಗ್

ನವದೆಹಲಿ,ಜೂ.22-ಭಾರತ ತಂಡದ ಕೋಚ್ ಆಗಿ ಯಾರೇ ಆಯ್ಕೆಯಾದರು ಕುಂಬ್ಳೆ ಸ್ಥಾನವನ್ನು ತುಂಬುವುದಕ್ಕೆ ಆಗುವುದಿಲ್ಲ. ಕುಂಬ್ಳೆ ಕೋಚಿಂಗ್ ಅವಧಿಯಲ್ಲಿ ಭಾರತ ತಂಡ ಸಾಕಷ್ಟು ಗೆಲುವುಗಳನ್ನು ಸಾಧಿಸಿದೆ ಎಂದು ಮಾಜಿ ಕ್ರಿಕೆಟರ್ ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ.

ನಾನು ಕುಂಬ್ಳೆ ಕೋಚಿಂಗ್ ನಲ್ಲಿ ಪಂದ್ಯಗಳನ್ನಾಡಿಲ್ಲ. ಕುಂಬ್ಳೆ ನಾಯಕರಾಗಿದ್ದಾಗ ನನಗೆ ಮಾರ್ಗದರ್ಶನ ನೀಡಿದ್ದಾರೆ. ಅವರ ಮಾರ್ಗದರ್ಶನದಿಂದ ಕಮ್ ಬ್ಯಾಕ್ ಪಡೆದುಕೊಂಡಿದ್ದೇನೆ. ಕೋಚ್ ಆಗಿ ಉತ್ತಮ ರೆಕಾರ್ಡ್ ಮಾಡಿದ್ದಾರೆ. ಅವರ ಸ್ಥಾನಕ್ಕೆ ಯಾರೇ ಬಂದರೂ ಅವರ ಮಟ್ಟಕ್ಕೇರಲು ಕಷ್ಟಪಡಬೇಕಾಗುತ್ತದೆ ಎಂದಿದ್ದಾರೆ.

ಕುಂಬ್ಳೆ ಅವರು ಕೋಚ್ ಆಗಿದ್ದಾಗ 17 ಟೆಸ್ಟ್ ಪಂದ್ಯಗಳ ಪೈಕಿ 12ರಲ್ಲಿ ಗೆಲುವು, 13 ಏಕದಿನ ಪಂದ್ಯಗಳ ಪೈಕಿ 8ರಲ್ಲಿ ಗೆಲುವು, 4ಟಿ20 ಪಂದ್ಯಗಳ ಪೈಕಿ 2ರಲ್ಲಿ ಗೆಲುವು ಸಾಧಿಸಿದೆ. ಕೋಚ್ ಹುದ್ದೆಗಾಗಿ ಟಾಮ್ ಮೂಡಿ, ಲಾಲ್ ಚಂದ್ ರಜಪೂತ್, ದೊಡ್ಡ ಗಣೇಶ್, ರಿಚರ್ಡ್ ಬೈಲ್ಸ್ ಜತೆ ಸೆಹ್ವಾಗ್ ಹೆಸರು ಇದೆ. (ವರದಿ-ಎಂ.ಎನ್)

Leave a Reply

comments

Related Articles

error: