ಮೈಸೂರು

ಜಿಎಸ್ ಟಿಯಿಂದ ದೇಶದ ಆದಾಯದಲ್ಲಿ ಹೆಚ್ಚಳ : ಡಾ.ಬಿ.ಎಸ್.ಶ್ರೀಕಂಠಾರಾಧ್ಯ

ಜಿಎಸ್ ಟಿಯಿಂದ ದೇಶದ ಆದಾಯ ಹೆಚ್ಚಾಗಿ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ತೆರಿಗೆ ತಜ್ಞ ಹಾಗೂ ಮೈಸೂರು ವಿವಿ ವಿಶ್ರಾಂತ ಪ್ರಾಧ್ಯಾಪಕ ಡಾ.ಬಿ.ಎಸ್.ಶ್ರೀಕಂಠಾರಾಧ್ಯ ಹೇಳಿದರು.

ಮೈಸೂರಿನ ಜೆ.ಎಲ್.ಬಿ ರಸ್ತೆಯಲ್ಲಿರುವ ಜೆ.ಎಸ್.ಎಸ್.ಕಲಾ ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ವಿಭಾಗಗಳು ಕಾಲೇಜಿನ ಸುವರ್ಣಮಹೋತ್ಸವ ಪ್ರಯುಕ್ತ ಏರ್ಪಡಿಸಿದ್ದ ಜಿಎಸ್ ಟಿ ಸಂವಾದ ಕಾರ್ಯಕ್ರಮದಲ್ಲಿ ಸಂವಾದಕರಾಗಿ ಪಾಲ್ಗೊಂಡು ಮಾತನಾಡಿದರು.

ಜಿಎಸ್ ಟಿಯಿಂದ ಹಿಂದಿನ ತೆರಿಗೆಗಳ ದೋಷಗಳು ಕಡಿಮೆಯಾಗುತ್ತವೆ. ಮತ್ತು ಇಡೀ ರಾಷ್ಟ್ರಕ್ಕೆ ಸಾಮಾನ್ಯವಾದ ತೆರಿಗೆ ಜಾರಿಗೆ ಬರುತ್ತದೆ. ಒಂದು ತೆರಿಗೆ ಒಂದು ದೇಶ ಎಂಬ ತತ್ವದಡಿಯಲ್ಲಿ   ಜಾರಿಗೆ ಬರಲಿರುವ ಈ ತೆರಿಗೆಯಿಂದ ರಾಷ್ಟ್ರದ ಆದಾಯ ಹೆಚ್ಚಾಗಿ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಪ್ರೊ.ಎಂ.ಆರ್.ಚಿಂತಾಮಣಿ ಮಾತನಾಡಿ ಈಗ ಜಾರಿಗೆ ಬರಲಿರುವ ಜಿಎಸ್ ಟಿ ಮೌಲ್ಯವರ್ಧಿತ ತೆರಿಗೆಯ ಮುಂದುವರಿದ ಭಾಗವಾಗಲಿದೆ. ಪ್ರಪಂಚದಲ್ಲಿ ಸುಮಾರು 160ದೇಶಗಳಲ್ಲಿ ಇದು ಜಾರಿಯಲ್ಲಿದೆ. ಇದು ಹಿತಕಾರಿ ತೆರಿಗೆಯಾಗಿದ್ದು ತೆರಿಗೆ ವಸೂಲಾತಿಯ ವೆಚ್ಚ ಕಡಿಮೆಯಾಗಿದ್ದು, ಭ್ರಷ್ಟಾಚಾರವೂ ಕಡಿಮೆಯಾಗುತ್ತದೆ. ಇದರಿಂದ ಜನರು ಸುಲಭವಾಗಿ ತೆರಿಗೆ ಕಟ್ಟುವ ವ್ಯವಸ್ಥೆ ಜಾರಿಗೆ ಬರುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕರಾದ ಪ್ರೊ.ಬಿ.ವಿ.ಸಾಂಬಶಿವಯ್ಯ, ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಎಂ. ಮಹದೇವಪ್ಪ, ಪಪೂ ಕಾಲೇಜಿನ ಪ್ರಾಂಶುಪಾಲ ಎಸ್.ಸೋಮಶೇಖರ್ ಉಪಸ್ಥಿತರಿದ್ದರು.

Leave a Reply

comments

Related Articles

error: