ಕರ್ನಾಟಕ

ಜೂ. 24 ರಂದು ಬೃಹತ್ ಉದ್ಯೋಗ ಮೇಳ : ಶಾಂತಕುಮಾರ್

ರಾಜ್ಯ(ತುಮಕೂರು)ಜೂ.22:- ಜಿಲ್ಲೆಯ ತಿಪಟೂರಿನಲ್ಲಿ ಜೂ. 24 ರಂದು ಬೃಹತ್ ಉದ್ಯೋಗ ಮೇಳ ಏರ್ಪಡಿಸಲಾಗಿದೆ ಎಂದು ಸಮಾಜ ಸೇವಕ ಶಾಂತಕುಮಾರ್ ತಿಳಿಸಿದರು.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಿಪಟೂರಿನ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಉದ್ಯೋಗ ಮೇಳ ನಡೆಯಲಿದೆ. ತಿಪಟೂರು ವಿಧಾನಸಭಾ ಕ್ಷೇತ್ರದ ನಿರುದ್ಯೋಗಿ ಯುವಕ-ಯುವತಿಯರಿಗೆ ಉದ್ಯೋಗ ದೊರಕಿಸಿಕೊಡಲು ಈ ಮೇಳ ಆಯೋಜಿಸಲಾಗಿದೆ ಎಂದರು. ಶಾಲೆ ತೊರೆದವರು, ಎಸ್ಎಸ್ಎಲ್‌ಸಿ, ಪಿಯುಸಿ ತೇರ್ಗಡೆಯಾದವರು, ಐಟಿಐ, ಡಿಪ್ಲೋಮಾ, ಜೆಓಸಿ ಪದವೀಧರರು, ಸ್ನಾತಕೋತ್ತರ ಪದವೀಧರರು ಮೇಳದಲ್ಲಿ ಭಾಗವಹಿಸಬಹುದಾಗಿದೆ. ಯಾವುದೇ ರೀತಿಯ ವಯೋಮಿತಿ ನಿಗದಿಪಡಿಸಿಲ್ಲ ಎಂದರು. ಇನ್ಫೋಸಿಸ್, ಆಕ್ಸಿಸ್ ಬ್ಯಾಂಕ್, ಕೆನರಾಬ್ಯಾಂಕ್, ವಿಜಯಾಬ್ಯಾಂಕ್, ಎವಿಕೆ ಸಾಫ್ಟ್‌ವೇರ್ ಕಂಪೆನಿ ಸೇರಿದಂತೆ 40 ಕಂಪೆನಿಗಳು ಮೇಳದಲ್ಲಿ ಭಾಗವಹಿಸಲಿವೆ. ಈಗಾಗಲೇ 4 ಸಾವಿರ ಉದ್ಯೋಗಾಕಾಂಕ್ಷಿಗಳು ಮೇಳದಲ್ಲಿ ಭಾಗವಹಿಸುವುದಕ್ಕೆ ನೋಂದಣಿ ಮಾಡಿಸಿಕೊಂಡಿದ್ದಾರೆ. ಪ್ರತಿದಿನ 500 ಮಂದಿ ನೋಂದಣಿ ಮಾಡಿಸಿಕೊಳ್ಳುತ್ತಿದ್ದಾರೆ ಎಂದರು. ಉದ್ಯೋಗ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಎನ್ಐಟಿ ಕಂಫರ್ಟ್ಸ್ ಸಂಸ್ಥೆಯ ಸಂಪನ್ಮೂಲ ವ್ಯಕ್ತಿಗಳು ಮಾರ್ಗದರ್ಶನ ಮಾಡಲಿದ್ದಾರೆ. ಸಂದರ್ಶನ ಎದುರಿಸುವ ಬಗ್ಗೆ, ಅಭ್ಯರ್ಥಿಯ ಶೈಕ್ಷಣಿಕ ಅರ್ಹತೆ ಮತ್ತು ಆಸಕ್ತಿಗನುಗುಣವಾಗಿ ಯಾವ ಉದ್ಯೋಗಕ್ಕೆ ಸೇರಿಸಿಕೊಳ್ಳಬಹುದು ಎಂಬುದರ ಬಗ್ಗೆ ತಿಳಿಸಿಕೊಡಲಿದ್ದಾರೆ. ಇದರಿಂದ ಮೇಳದಲ್ಲಿ ಅಭ್ಯರ್ಥಿಗಳು ಸಂದರ್ಶನವನ್ನು ಧೈರ್ಯವಾಗಿ ಎದುರಿಸಬಹುದು ಎಂದರು.
ಆಯ್ಕೆಯಾದವರಿಗೆ ಸ್ಥಳದಲ್ಲಿಯೇ ಉದ್ಯೋಗಪತ್ರ ನೀಡಲಾಗುವುದು. ಉದ್ಯೋಗ ಮೇಳಕ್ಕೆ ಬರುವಾಗ ಸ್ವವಿವರ ಪತ್ರದ ಕನಿಷ್ಠ 10 ಪ್ರತಿಗಳನ್ನು ತರಬೇಕು. ತಿಪಟೂರಿನಲ್ಲಿರುವ ಎನ್ಐಟಿ ಕಂಫರ್ಟ್ಸ್, ಗುರುಕುಲ ಸೂಪರ್ ಮಾರ್ಕೆಟ್, ರವಿ ಇಂಟರ್‌ನೆಟ್ ಸೆಂಟರ್‌ನಲ್ಲಿ ನೋಂದಣಿ ಮಾಡಿಸಬಹುದು. ಹೆಚ್ಚಿನ ಮಾಹಿತಿಗಾಗಿ ಮೊ- 8073247949 ಸಂಪರ್ಕಿಸಬಹುದಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ದಯಾನಂದಸಾಗರ್, ವಿಕ್ರಂ ಉಪಸ್ಥಿತರಿದ್ದರು

Leave a Reply

comments

Related Articles

error: