ಮನರಂಜನೆ

ಇಂದು ‘ಚೆಲುವಿನ ಚಿತ್ತಾರ’ ಸಿನಿಮಾ ಬಿಡುಗಡೆಯಾಗಿ 10 ವರ್ಷಗಳಾದ ಸಂಭ್ರಮ

ರಾಜ್ಯ, ಬೆಂಗಳೂರು, ಜೂ.22: ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಅಮೂಲ್ಯ ಅವರಿಗೆ ಇಂದು ವಿಶೇಷವಾದ ದಿನ. ಕಾರಣ ಇಂದು ಅವರಿಬ್ಬರ ನಟನೆಯ ‘ಚೆಲುವಿನ ಚಿತ್ತಾರ’ ಸಿನಿಮಾ ಬಿಡುಗಡೆಯಾಗಿ ಹತ್ತು ವರ್ಷಗಳಾದ ಸಂಭ್ರಮದ  ದಿನ.
‘ಚೆಲುವಿನ ಚಿತ್ತಾರ’ ಸಿನಿಮಾದ ಯಶಸ್ಸಿನಿಂದಲೇ ಈ ಜೋಡಿ ಸ್ಯಾಂಡಲ್ ವುಡ್ ನ ‘ಗೋಲ್ಡನ್ ಪೇರ್’ ಎಂದು ಕರೆಯಿಸಿಕೊಂಡರು. ಜೂನ್ 22 ರ  2007 ರಲ್ಲಿ ‘ಚೆಲುವಿನ ಚಿತ್ತಾರ’ ಸಿನಿಮಾ ಬಿಡುಡೆಯಾಗಿತ್ತು. ಬಾಲನಟಿಯಾಗಿದ್ದ ಅಮೂಲ್ಯ ಈ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕ ನಟಿಯಾದರು.  ನಟಿ ಅಮೂಲ್ಯ ಈಗ ಕನ್ನಡ ಚಿತ್ರರಂಗದಲ್ಲಿ ನಾಯಕಿಯಾಗಿ ಹತ್ತು ವರ್ಷಗಳನ್ನು ಕಳೆದಿದ್ದಾರೆ.
ತಮ್ಮ ಈ ಸಂತಸವನ್ನು ಅಮೂಲ್ಯ ಟ್ವಿಟ್ಟರ್ ನ ಮೂಲಕ ಹಂಚಿಕೊಂಡಿದ್ದು, ಅಭಿಮಾನಿಗಳಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ‘ಚೆಲುವಿನ ಚಿತ್ತಾರ’ ಚಿತ್ರಕ್ಕೆ 10 ವರ್ಷಗಳಾಗಿದೆ. ಇದೇ ಸಿನಿಮಾದಿಂದ ಅಮೂಲ್ಯ ‘ಐಸು’ ಆಗಿ ಬದಲಾದಳು ಅಂತ ಹೇಳಿದ್ದಾರೆ.  ಈ ಸಿನಿಮಾವನ್ನು ಕಲಾ ಸಾಮ್ರಾಟ್ ಎಸ್.ನಾರಾಯಣ್ ನಿರ್ದೇಶನ ಮತ್ತು ನಿರ್ಮಾಣ ಮಾಡಿದ್ದರು. (ವರದಿ: ಎಲ್.ಜಿ)

Leave a Reply

comments

Related Articles

error: