ಮೈಸೂರು

ಗೋಲ್ಡನ್ ಚಾರಿಯಟ್ ನಲ್ಲಿ ಬಂದಿಳಿದ ಪ್ರವಾಸಿಗರು

ಮೈಸೂರು ದಸರಾ ಪ್ರಯುಕ್ತ ಆಯೋಜಿಸಲಾದ ಐಷಾರಾಮಿ ಪ್ರವಾಸಿ ರೈಲು ಗೋಲ್ಡನ್ ಚಾರಿಯಟ್ ಶನಿವಾರ ಮೈಸೂರು ರೈಲ್ವೆ ನಿಲ್ದಾಣಕ್ಕೆ ಆಗಮಿಸಿದೆ.

ಬೆಂಗಳೂರಿನಿಂದ ಆಗಮಿಸಿದ ಈ ರೈಲಿನಲ್ಲಿ 70ಮಂದಿ ಪ್ರಯಾಣಿಕರಿದ್ದು, ರಾಜ್ಯ ಪ್ರವಾಸೋದ್ಯಮದ ಸಿಬ್ಬಂದಿಗಳು ಅವರನ್ನು ಸ್ವಾಗತಿಸಿದರು. ಬಳಿಕ ಪ್ರವಾಸಿಗರನ್ನು ಶ್ರೀರಂಗಪಟ್ಟಣಕ್ಕೆ ಎರಡು ಬಸ್ಸುಗಳಲ್ಲಿ ಕರೆದೊಯ್ಯಲಾಗಿದ್ದು, ಟಿಪ್ಪುವಿನ ಬೇಸಿಗೆ ಅರಮನೆ, ಗುಂಬಜ್, ದರಯಾ ದೌಲತ್, ನಿಮಿಷಾಂಬ ದೇವಸ್ಥಾನಗಳನ್ನು ತೋರಿಸಲಾಗಿದೆ.

ಅಲ್ಲಿಂದ ಮರಳಿದ ಪ್ರವಾಸಿಗರನ್ನು ಲಲಿತಮಹಲ್ ಅರಮನೆಗೆ ಊಟಕ್ಕೆ ಕರೆದೊಯ್ಯಲಾಗಿದ್ದು, ಬಳಿಕ ಮೈಸೂರಿನ ವಿವಿಧ ಪ್ರವಾಸಿ ತಾಣಗಳನ್ನು ಅವರಿಗೆ ತೋರಿಸಲಾಗಿದೆ. ಈ ಐಷಾರಾಮಿ ರೈಲಿನಲ್ಲಿ ಒಬ್ಬರಿಗೆ 30ಸಾವಿರ ರೂ. ನಿಗದಿಪಡಿಸಲಾಗಿದ್ದು, 2ರಾತ್ರಿ 1ಹಗಲು ಪ್ರಯಾಣ ಸೇರಿದಂತೆ ಎಲ್ಲಾ ರೀತಿಯ ವಿಶೇಷ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

Leave a Reply

comments

Related Articles

error: