ಮೈಸೂರು

ಮೆಟ್ಟಿಲು ಹತ್ತುವ ಸ್ಪರ್ಧೆಯಲ್ಲಿ ಯುವಜನತೆಯ ಉತ್ಸಾಹ

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದಲ್ಲಿ ದಸರಾ ಉತ್ಸವದ ಅಂಗವಾಗಿ ಆಯೋಜಿಸಲಾದ ಚಾಮುಂಡಿ ಬೆಟ್ಟದ ಮೆಟ್ಟಿಲು ಹತ್ತುವ ಸ್ಪರ್ಧೆಯಲ್ಲಿ ನೂರಾರು ಉತ್ಸಾಹಿ ಯುವಕ-ಯುವತಿಯರು, ಮಕ್ಕಳು ಪಾಲ್ಗೊಂಡು ಸಂಭ್ರಮಿಸಿದರು.

ಹಸಿರು ನಿಶಾನೆ ತೋರುವ ಮೂಲಕ ಸ್ಪರ್ಧೆಗೆ ಚಾಲನೆ ನೀಡಲಾಯಿತು. ಚಾಲನೆ ದೊರೆಯುತ್ತಿದ್ದಂತೆ ಸ್ಪರ್ಧಾರ್ಥಿಗಳು ವೇಗದಿಂದ ಮೆಟ್ಟಿಲು ಹತ್ತುತ್ತಿರುವುದು ಕಂಡು ಬಂತು. ಕೆಲವರು ಆರಂಭದಲ್ಲಿ ವೇಗ ಹೆಚ್ಚಿಸಿಕೊಂಡು ನಂತರ ನಿಧಾನವಾಗಿ ನಡೆದರು. ಇನ್ಕೆಲವರು ಸಮ ವೇಗದಲ್ಲಿ ಸಾಗಿ ಗುರಿ ತಲುಪಿದರು.

Leave a Reply

comments

Related Articles

error: