ಕರ್ನಾಟಕ

ಹುತಾತ್ಮ ರೈತರಿಗೆ ಗೌರವ ಸಲ್ಲಿಸಿ: ಸಚಿನ್ ಮೀಗಾ

ಪಾಂಡವಪುರ,ಜೂ.22- ಸಾಲ ಮನ್ನಾ ಪಡೆದ ರೈತರು ಹುತಾತ್ಮ ಯೋಧರಿಗೆ ಗೌರವ ಸಲ್ಲಿಸುಂತೆ ಹುತಾತ್ಮ ರೈತರಿಗೂ ಗೌರವ ಸಲ್ಲಿಸಬೇಕು ಎಂದು ಕೆಪಿಸಿಸಿ ರೈತ ವಿಭಾಗದ ರಾಜ್ಯ ಅಧ್ಯಕ್ಷ ಸಚಿನ್ ಮೀಗಾ ಹೇಳಿದರು.

ರಾಜ್ಯ ಸರ್ಕಾರ ಸಾಲ ಮನ್ನಾ ಮಾಡಿದ ಹಿನ್ನೆಲೆಯಲ್ಲಿ ಇದಕ್ಕೆ ಕಾರಣಕರ್ತರಾದ ರೈತರಲ್ಲಿ ಒಬ್ಬರಾದ ರೈತ ನಿಂಗೇಗೌಡ ಅವರ ಮನೆಗೆ ಭೇಟಿ ನೀಡಿ ಗೌರವ ಸಲ್ಲಿಸಿದಲ್ಲದೆ, ರೈತನ ಕುಟುಂಬದವರಿಗೆ ಧೈರ್ಯ ಹೇಳಿದರು.

ರಾಜ್ಯ ಸರ್ಕಾರ ಲಕ್ಷಾಂತರ ರೈತರ ಸಾಲ ಮನ್ನಾ ಮಾಡಲು ಹುತಾತ್ಮ ರೈತರು ಕಾರಣ. ಹೀಗಾಗಿ ಸಾಲ ಮನ್ನಾ ಪಡೆದ ರೈತರೆಲ್ಲರೂ ಮೃತ ರೈತರಿಗೆ ಗೌರವ ಸಲ್ಲಿಸಬೇಕು ಎಂದರು.

ಈ ಸಂದರ್ಭದಲ್ಲಿ ಕಿಸಾನ್ ಪದಾಧಿಕಾರಿಗಳು ಉಪಸ್ಥಿತರಿದ್ದರು. (ವರದಿ-ಎಸ್.ಎನ್, ಎಂ.ಎನ್)

Leave a Reply

comments

Related Articles

error: