ಮೈಸೂರು

ಅಕ್ಟೋಬರ್ 10: ಪಂಜಿನ ಕವಾಯತು ತಾಲೀಮು

ಮೈಸೂರಿನ ಬನ್ನಿಮಂಟಪ ಮೈದಾನದಲ್ಲಿ ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಅಕ್ಟೋಬರ್ 10ರಂದು ಪಂಜಿನ ಕವಾಯತು ಕಾರ್ಯಕ್ರಮದ ತಾಲೀಮು ನಡೆಯಲಿದ್ದು, ಸಾರ್ವಜನಿಕರು ಶಾಂತರೀತಿಯಿಂದ ವರ್ತಿಸಬೇಕೆಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ತಿಳಿಸಿದರು.

ಪಂಜಿನ ಕವಾಯತು ತಾಲೀಮು ಕಾರ್ಯಕ್ರಮ ಆಯುಧ ಪೂಜೆಯ ದಿನ ರಾತ್ರಿ 8 ಗಂಟೆಗೆ ಆರಂಭವಾಗಿ 10 ಗಂಟೆಯವರೆಗೆ ನಡೆಯಲಿದೆ. ಇದೇ ಕಾರ್ಯಕ್ರಮ ಅಕ್ಟೋಬರ್ 11ರಂದು ರಾತ್ರಿ 8 ಗಂಟೆಯಿಂದ 10 ಗಂಟೆಯವರೆಗೆ ನಡೆಯಲಿದ್ದು, ರಾಜ್ಯಪಾಲರು ತೆರೆದ ಜೀಪ್ ನಲ್ಲಿ ತೆರಳಿ ಗೌರವ ವಂದನೆ ಸ್ವೀಕರಿಸಲಿದ್ದಾರೆ. ಎಚ್.ಡಿ. ಕೋಟೆ ತಾಲೂಕಿನ ದೇವಲಾಪುರ ಗ್ರಾಮದ ಅಮ್ಮ ರಾಮಚಂದ್ರ, ಅಮ್ಮ ವಸುಂಧರಾ ಕಲಾ ತಂಡದವರಿಂದ ನಾಡಗೀತೆ, ಡೇರ್ ಡೆವಿಲ್ ಮಿಲಿಟರಿ ಪೊಲೀಸರಿಂದ ಮೋಟರ್ ಸೈಕಲ್ ಸ್ಟಂಟ್ಸ್, ನಾಗೇಶ್ ಕಂದಗಾಲ ಇಂಗ್ಲಿಷ್ ಕ್ರಿಯೇಷನ್ ತಂಡದಿಂದ ಜಾನಪದ ನೃತ್ಯ, ಮೌಂಟೆಡ್ ಪೊಲೀಸರಿಂದ ಟೆಂಟ್ ಪೆಗ್ಗಿಂಗ್, ಬಾಗಲಕೋಟೆಯ ತುಳಸಿಗೆರೆಯ ಮಲ್ಲಕಂಬ ಸಂಸ್ಥೆಯವರಿಂದ ಮಲ್ಲಕಂಬ ಕಸರತ್ತು ಪ್ರದರ್ಶನ, ಬಳಿಕ ರಾಜ್ಯ ಪೊಲೀಸ್ ಪಡೆಯಿಂದ ಪಂಜಿನ ಕವಾಯತು ನಡೆಯಲಿದೆ.

Leave a Reply

comments

Related Articles

error: