ಕರ್ನಾಟಕ

ನಿಶ್ಚಿತಾರ್ಥದ ಬಳಿಕ ಚಾಕು ತೋರಿಸಿ ಅತ್ಯಾಚಾರವೆಸಗಿದ ಭಾವೀ ಪತಿ

ರಾಜ್ಯ(ಬೆಂಗಳೂರು)ಜೂ.23:-  ನಿಶ್ಚಿತಾರ್ಥದ ಬಳಿಕ ಚಾಕು ತೋರಿಸಿ ಯುವತಿಯ ಮೇಲೆ ಆಕೆಯ ಭಾವಿ ಪತಿಯೇ ಅತ್ಯಾಚಾರವೆಸಗಿದ ಘಟನೆ ನಗರದಲ್ಲಿ ನಡೆದಿದೆ.

ಆರೋಪಿ ಭಾವಿ ಪತಿಯನ್ನು ಸುರೇಶ್ ಎನ್ನಲಾಗಿದೆ. ಈತ ನಿಶ್ಚಿತಾರ್ಥ ಮಾಡಿಕೊಂಡು ನಂತರ ಮದುವೆಯಾಗುವುದಿಲ್ಲ ಅಂತ ಮದುವೆ ರದ್ದುಗೊಳಿಸಿದ್ದನು. ನಂತರ ಆಕೆಯನ್ನು ಮತ್ತೆ ಮದುವೆಯಾಗುತ್ತೇನೆ ಅಂತ ಹೇಳಿದ್ದು, ಮನೆಯಲ್ಲಿ ಯಾರೂ ಇಲ್ಲದ ವೇಳೆ ಚಾಕು ತೋರಿಸಿ ಅತ್ಯಾಚಾರವೆಸಗಿದ್ದನು. ಸ್ವಲ್ಪ ಸಮಯದ ಬಳಿಕ ಆಕೆ ಗರ್ಭಿಣಿ ಅಂತ ತಿಳಿದಾಗ ಒತ್ತಾಯ ಪೂರ್ವಕವಾಗಿ ಅಬಾರ್ಷನ್ ಮಾಡಿಸಿದ್ದಾನೆ ಎಂದು ನೊಂದ ಯುವತಿ ದೂರಿದ್ದಾರೆ.  ನೊಂದ ಯುವತಿ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: