ಕ್ರೀಡೆಪ್ರಮುಖ ಸುದ್ದಿ

ಡ್ರೆಸಿಂಗ್ ಗುಟ್ಟನ್ನು ರಟ್ಟು ಮಾಡುವುದಿಲ್ಲ: ಕೊಹ್ಲಿ

ಪ್ರಮುಖ ಸುದ್ದಿ, ಕ್ರೀಡೆ, ಟ್ರಿನಿಡಾಡ್, ಜೂ.23: ಡ್ರೆಸಿಂಗ್ ರೂ ಪಾವಿತ್ರ್ಯತೆಯನ್ನು  ನಾವು ನಿರ್ವಹಣೆ ಮಾಡಲೇಬೇಕು. ಅದನ್ನು ಯಾವುದೇ ಕಾರಣಕ್ಕೂ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಗುಟ್ಟನ್ನು ರಟ್ಟು ಮಾಟುವುದಿಲ್ಲ ಎಂದು ಟೀಂ ನಾಯಕ ವಿರಾಟ್ ಕೊಹ್ಲಿ ನೇರವಾಗಿ ಹೇಳಿದ್ದಾರೆ.

ಅನಿಲ್ ಕುಂಬ್ಳೆ ಕೋಚ್ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಇದೇ ಮೊದಲ ಬಾರಿಗೆ ಬಾಯ್ಬಿಟ್ಟಿರುವ ಕೊಹ್ಲಿ ವೆಸ್ಟ್ ಇಂಡೀಸ್ ವಿರುದ್ಧ ಇಂದಿನಿಂದ ಆರಂಭವಾಗಲಿರುವ 5 ಪಂದ್ಯಗಳ ಏಕಿದಿನ ಸರಣಿಗೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ ಚಾಂಪಿಯನ್ಸ್ ಟ್ರೋಫಿ ಸಂದರ್ಭದಲ್ಲಿ 11 ಪತ್ರಿಕಾಗೋಷ್ಠಿ ನಡೆಸಿದ್ದೆ. ಎಲ್ಲಿಯೂ ಡ್ರೆಸಿಂಗ್ ರೂಂ ವಿಷಯ ಬಿಟ್ಟುಕೊಟ್ಟಿರಲಿಲ್ಲ. ಮುಂದೆಯೂ ಬಿಟ್ಟುಕೊಡುವುದಿಲ್ಲ. ಕಳೆದ ಮೂರ್ನಾಲ್ಕು ವರ್ಷಗಳಿಂದಲೂ  ಡ್ರೆಸ್ಸಿಂಗ್ ರೂಂ ಗುಟ್ಟನ್ನು ಬಹಿರಂಗಪಡಿಸದ ಸಂಸ್ಕೃತಿಯನ್ನು ಬೆಳೆಸಿಕೊಂಡು ಬಂದಿದ್ದೇವೆ. ತಂಡದ ಎಲ್ಲ ಸದಸ್ಯರು ಇದಕ್ಕೆ ಬದ್ಧರಾಗಿದ್ದಾರೆ. ಡ್ರಿಸಿಂಗ್  ರೂಂನಲ್ಲಿ ನಡೆಯುವ ಪ್ರತೀಯೊಂದು ಘಟನೆ ಕೂಡ ಆಟಗಾರರ ತೀರಾ ಖಾಸಗಿ ವಿಚಾರವಾಗಿರುವುದರಿಂದ ಅದರ ವಿತ್ರ್ಯತೆಯನ್ನು ನಾವು ನಿರ್ವಹಣೆ ಮಾಡಲೇಬೇಕು ಎಂದರು.

ಕುಂಬ್ಳೆ ನಿರ್ಧಾರವನ್ನು ಗೌರವಿಸಬೇಕು: ಅನಿಲ್ ಕುಂಬ್ಳೆ ರಾಜೀನಾಮೆ ಕುರಿತಂತೆ  ಮಾರ್ಮಿಕವಾಗಿ ಪ್ರತಿಕ್ರಿಯಿಸಿದ ಕೊಹ್ಲಿ, ಅನಿಲ್ ಭಾಯ್ ಕೋಚ್ ಹುದ್ದೆಯಿಂದ ದೂರ ಸರಿಯುವ ನಿರ್ಧಾರ ಕೈಗೊಂಡಿದ್ದಾರೆ. ನಾವು ಅವರ ನಿರ್ಧಾರವನ್ನು ಗೌರವಿಸಬೇಕಾಗಿದೆ. ಓರ್ವ ಕ್ರಿಕೆಟಿಗನಾಗಿ ಅನಿಲ್ ಭಾಯ್ ಅವರನ್ನು ನಾನು ತುಂಬಾ ಗೌರವಿಸುತ್ತೇನೆ. ಅವರು  ಹಲವು ವರ್ಷಗಳ ಕಾಲ ದೇಶಕ್ಕಾಗಿ ಆಡಿ ಅಪಾರ ಕೊಡುಗೆ ನೀಡಿದ್ದಾರೆ. ನನಗೆ ಅವರ ಮೇಲೆ ಗೌರವವಿದೆ. ಚಾಂಪಿಯನ್ಸ್ ಟ್ರೋಫಿ ಬಳಿಕ  ಅನಿಲ್ ಕುಂಬ್ಳೆ ತಂಡದ ಕೋಚ್ ಹುದ್ದೆ ತೊರೆಯುವುದು ಎಲ್ಲರಿಗೂ ಗೊತ್ತಿತ್ತು. ಇದರಲ್ಲಿ ಆಶ್ಚರ್ಯ ಪಡುವುದು ಏನೂ ಇಲ್ಲ ಎಂದು ಹೇಳಿದ್ದಾರೆ. (ವರದಿ ಬಿ.ಎಂ)

Leave a Reply

comments

Related Articles

error: