ದೇಶಪ್ರಮುಖ ಸುದ್ದಿವಿದೇಶ

‘ಗೇಮ್‍ ಛೇಂಜರ್’ ಗಾರ್ಡಿಯನ್ ಡ್ರೋನ್‍ ನೀಡಲು ಅಮೆರಿಕ ಒಪ್ಪಿಗೆ : ಸೇನೆಗೆ ಮತ್ತಷ್ಟು ಬಲ

ವಾಷಿಂಗ್ಟನ್, ಜೂ.23 : ಭಾರತಕ್ಕೆ 22 ಗಾರ್ಡಿಯನ್ ಡ್ರೋನ್‍ಗಳನ್ನು ಮಾರಾಟ ಮಾಡಲು ಅಮೆರಿಕ ಸರ್ಕಾರ ಒಪ್ಪಿಗೆ ಸೂಚಿಸಿದ್ದು, ಸೇನೆಯ ಬಲವರ್ಧನೆ ದೃಷ್ಟಿಯಿಂದ ಈ ಬೆಳವಣಿಗೆ ಭಾರೀ ಮಹತ್ವ ಪಡೆದಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಪ್ರವಾಸಕ್ಕೂ ಮೊದಲೇ ಅಮೆರಿಕವು ಭಾರತಕ್ಕೆ 22 ಗಾರ್ಡಿಯನ್ ಡ್ರೋನ್‍ಗಳನ್ನು ಮಾರಾಟ ಮಾಡಲು ಒಪ್ಪಿಗೆ ಸೂಚಿಸಿರುವುದು ಉಭಯ ರಾಷ್ಟ್ರಗಳ ರಕ್ಷಣಾ ಸಂಬಂಧ ಸುಧಾರಣೆಯಲ್ಲಿ ಮಹತ್ವದ ಕ್ರಮವಾಗಿದೆ. ವಿಶ್ವದ ರಕ್ಷಣಾ ತಜ್ಞರು “ದಿ ಗೇಮ್ ಚೇಂಜರ್” ಎಂದೇ ಕರೆಯುವ ಗಾರ್ಡಿಯನ್ ಡ್ರೋನ್ ಗಳು ಶೀಘ್ರದಲ್ಲೇ ಭಾರತೀಯ ಸೇನೆಯ ಬತ್ತಳಿಕೆ ಸೇರಲಿವೆ. ಇದು ಹತ್ತೊಂಭತ್ತು ಸಾವಿರ ಕೋಟಿಯಷ್ಟು ದೊಡ್ಡ ಮೊತ್ತದ ಒಪ್ಪಂದವಾಗಿದ್ದು, ಈ ಒಪ್ಪಂದಕ್ಕೆ ಅಮೆರಿಕ ವಿದೇಶಾಂಗ ಇಲಾಖೆ ಬುಧವಾರ ಒಪ್ಪಿಗೆ ನೀಡಿದೆ.

ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ ನೂತನ ಅಧ್ಯಕ್ಷರಾದ ಬಳಿಕ ಭಾರತದೊಂದಿಗೆ ಮಾಡಿಕೊಂಡ ಮೊದಲ ಮಹತ್ವದ ಒಪ್ಪಂದವಿದು. ಒಬಾಮ ಆಡಳಿತದ ಸಂದರ್ಭದಲ್ಲೇ ಅಮೆರಿಕ ಕಾಂಗ್ರೆಸ್ ಭಾರತಕ್ಕೆ ಪ್ರಿಡೇಟರ್ ಡ್ರೋನ್‍ಗಳನ್ನು ಮಾರಾಟ ಮಾಡುವ ಒಪ್ಪಂದಕ್ಕೆ ಅನುಮೋದನೆ ನೀಡಿತ್ತು. ಇದೇ ವೇಳೆ ಹಿಂದಿನ ಒಬಾಮಾ ಆಡಳಿತಕ್ಕೆ ಹೋಲಿಸಿದರೆ ಟ್ರಂಪ್ ಸರ್ಕಾರ ಭಾರತದೊಂದಿಗೆ ಆಶ್ವಾಸನೆಯಲ್ಲಿ ಕಾಲ ತಳ್ಳುವ ಬದಲು ಕಾರ್ಯರೂಪಕ್ಕಿಳಿಸಿ ಸಂಬಂಧ ಸುಧಾರಿಸುವತ್ತ ಮಹತ್ವದ ಹೆಜ್ಜೆ ಇಟ್ಟಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

-ಎನ್.ಬಿ.

Leave a Reply

comments

Related Articles

error: