ಮೈಸೂರು

ಅಸ್ವಸ್ಥವಾಗಿರುವ ಕುದುರೆ ಸಾರ್ವಜನಿಕರಿಗೆ ಗೋಚರ

ಮೈಸೂರು,ಜೂ.23:- ಮೈಸೂರಿನ ಕುಕ್ಕರ ಹಳ್ಳಿ ಕೆರೆಯ ಬಳಿ ಕುದುರೆಯೊಂದು ಕಳೆದ ಮೂರು ದಿನಗಳಿಂದ ಅಸ್ವಸ್ಥವಾಗಿ ನರುಳುತ್ತಾ ಬಿದ್ದಿರುವುದು ಸಾರ್ವಜನಿಕರಿಗೆ ಕಂಡು ಬಂದಿದೆ.

ಈ ಕುದುರೆಯ ಒಂದು  ಕಾಲಿಗೆ ಗಾಯವಾಗಿದ್ದು, ಮೂರು ಕಾಲಿನ ಮೂಲಕ ಕುಂಟುತ್ತಾ ನರಳುತ್ತಿದೆ. ಯಾವುದೋ ವಾಹನದ ಅಪಘಾತದಿಂದ ಕುದುರೆ ಕಾಲಿಗೆ ಗಾಯವಾಗಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಅರಣ್ಯ ಇಲಾಖೆ ಸಿಬ್ಬಂದಿಗಳು ಮತ್ತು ಪಶುವೈದ್ಯ ಇಲಾಖೆ ಸಹಕರಿಸಿದರೆ ಕುದುರೆಯ ಪ್ರಾಣ ಕಾಪಾಡಬಹುದಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಕುದುರೆ ರಕ್ಷಿಸಬೇಕಾಗಿದೆ. ಈ ಕುರಿತು ಮಾತನಾಡಿದ ಸಾರ್ವಜನಿಕರು ಕಳೆದ ಮೂರು ದಿನಗಳಿಂದ ಇದೇ ಸ್ಥಳದಲ್ಲಿ ಕುದುರೆ ಕಂಡು ಬಂದಿದೆ. ಮೂರು ದಿನವಾದರೂ ಇಲ್ಲೇ ಇರುವುದರಿಂದ ಏನಾಗಿದೆ ಎಂದು ಹತ್ತಿರ ಹೋಗಿ ನೋಡಲಾಗಿ ಕಾಲಿಗೆ ಗಾಯವಾಗಿರುವುದು ಕಂಡು ಬಂತು ಎಂದಿದ್ದಾರೆ. ಒಟ್ಟಿನಲ್ಲಿ ಅರಣ್ಯ ಇಲಾಖಾಧಿಕಾರಿಗಳು ಈ ಕುರಿತು ಗಮನ ಹರಿಸಿದರೆ ಒಳ್ಳೆಯದು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: