ದೇಶಪ್ರಮುಖ ಸುದ್ದಿ

ಕಾಂಗ್ರೆಸ್ ಆಗ್ರಹ : ಸಾಲಮನ್ನಾ ಫ್ಯಾಶನ್ ಆಗಿದೆ ಎಂದ ವೆಂಕಯ್ಯ ನಾಯ್ಡು ಕ್ಷಮೆ ಕೇಳಬೇಕು

ನವದೆಹಲಿ, ಜೂನ್ 23: ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ವೆಂಕಯ್ಯ ನಾಯ್ಡು ಅವರು ಇತ್ತೀಚೆಗೆ ರೈತರ ಸಾಲಮನ್ನಾದ ಬಗ್ಗೆ ಲಘು ಹೇಳಿಕೆ ನೀಡಿದ ಬಗ್ಗೆ ಕ್ಷಮೆ ಕೇಳಬೇಕು ಎಂದು ಕಾಂಗ್ರೆಸ್ ಪಕ್ಷ ಒತ್ತಾಯಿಸಿದೆ.

“ಸಾಲಮನ್ನಾ ಎಂಬುದು ಇತ್ತೀಚಿನ ದಿನಗಳಲ್ಲಿ ಫ್ಯಾಶನ್ ಆಗಿಬಿಟ್ಟಿದೆ” ಎಂದು ಸಚಿವ ವೆಂಕಯ್ಯ ಅವರುಕ ಕ್ಷಮೆ ಕೇಳಬೇಕು. ದೇಶದಲ್ಲಿ ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಈ ಹೇಳಿಕೆ ನೀಡಿರುವುದು ರೈತರ ಬಗೆಗೆ ಅವರಿಗಿರುವ ಉಡಾಫೆಯ ಧೋರಣೆಯನ್ನು ತೋರಿಸುತ್ತದೆ ಎಂದು ಕಾಂಗ್ರೆಸ್ ಟೀಕಿಸಿದೆ.

ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ರೈತರ ಆಕ್ರೋಶ ಹಿಂಸಾರೂಪಕ್ಕೆ ತಿರುಗಿದ ನಂತರ ಮಹಾರಾಷ್ಟ್ರದಲ್ಲಿ ರೈತರ ಮನ್ನಾ ಮಾಡುವುದಾಗಿ ಅಲ್ಲಿನ ಸರ್ಕಾರ ಘೋಷಿಸಿದೆ. ಆನಂತರ ಪಂಜಾಬ್ ಮತ್ತು ಕರ್ನಾಟಕದಲ್ಲೂ ರೈತರ ಸಾಲಮನ್ನಾ ಮಾಡುವ ಬಗ್ಗೆ ಘೋಷಣೆ ಮಾಡಲಾಗಿದೆ. ಈ ಕ್ರಮಗಳನ್ನು ಗಮನದಲ್ಲಿಟ್ಟುಕೊಂಡು ಮಾತನಾಡಿದ್ದ ವೆಂಕಯ್ಯ ಅವರು, “ರೈತರ ಸ್ಥಿತಿ ತೀರಾ ಚಿಂತಾಜನಕವಾಗಿದ್ದರೆ ಅಥವಾ ಅನಿವಾರ್ಡ ಪರಿಸ್ಥಿತಿಯಲ್ಲಿ ಮಾತ್ರ ಸಾಲಮನ್ನಾ ಮಾಡಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಸಾಲಮನ್ನಾ ಮಾಡುವುದು ಒಂದು ಫ್ಯಾಶನ್ ಆಗಿಬಿಟ್ಟಿದೆ, ಅಗತ್ಯವಿಲ್ಲದಿದ್ದರೂ ಸರ್ಕಾರಗಳು ಸಾಲಮನ್ನಾ ಮಾಡುತ್ತಿವೆ” ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು.

-ಎನ್.ಬಿ.

Leave a Reply

comments

Related Articles

error: