ಮೈಸೂರು

ಪಂಜಿನ ಕವಾಯತು ವೀಕ್ಷಣೆಗೆ ಪಾಸ್ ವಿತರಣೆ

ಐತಿಹಾಸಿಕ ದಸರಾ ಮಹೋತ್ಸವದ ಆಕರ್ಷಣೆಯ ಕೇಂದ್ರ ಬಿಂದು ದಸರಾ ಜಂಬೂ ಸವಾರಿ. ಇದನ್ನು ವೀಕ್ಷಿಸಲೆಂದೇ ರಾಜ್ಯದ ವಿವಿಧ ಭಾಗಗಳಿಂದಷ್ಟೇ ಅಲ್ಲದೇ ದೇಶದ ವಿವಿಧೆಡೆಯಿಂದ ಪ್ರವಾಸಿಗರು ಆಗಮಿಸುತ್ತಾರೆ. ಅಷ್ಟೇ ಏಕೆ ಈಗಾಗಲೇ ವಿದೇಶಗಳಿಂದಲೂ ಪ್ರವಾಸಿಗರು ನಗರಕ್ಕೆ ಆಗಮಿಸಿದ್ದಾರೆ. ಜಂಬೂ ಸವಾರಿಯನ್ನು ವೀಕ್ಷಿಸಲು ಜಿಲ್ಲಾಡಳಿತ ವತಿಯಿಂದ ಪಾಸ್ ಗಳನ್ನು ವಿತರಿಸಲಾಗುತ್ತಿದೆ.

ಅಕ್ಟೋಬರ್ 11ರಂದು ಜಂಬೂ ಸವಾರಿ ನಡೆಯಲಿದ್ದು, ಅದೇ ದಿನ ಸಂಜೆ ಬನ್ನಿಮಂಟಪದಲ್ಲಿ ಆಕರ್ಷಕ ಪಂಜಿನ ಕವಾಯತು ಪ್ರದರ್ಶನಗೊಳ್ಳಲಿದೆ. ಪ್ರದರ್ಶನ ವೀಕ್ಷಿಸಲು ಜಿಲ್ಲಾಡಳಿತ ಪಾಸ್ ವಿತರಿಸುತ್ತಿದ್ದು, ಪಾಸ್ ಕೊಳ್ಳಲು ಸಾರ್ವಜನಿಕರು ಮುಗಿಬಿದ್ದಿರುವುದು ಕಂಡು ಬಂತು. ಕೆಲವರು ಸರತಿಯ ಸಾಲಿನಲ್ಲಿ ನಿಂತು ನಿಗದಿತ ಹಣ ಪಾವತಿಸಿ ಪಾಸ್ ಗಳನ್ನು ಪಡೆದರು.

Leave a Reply

comments

Related Articles

error: