ದೇಶಪ್ರಮುಖ ಸುದ್ದಿ

ಮನೆಗೆ ಒಳಿತಾಗಲಿ ಎಂದು ಮನೆಯ ಬೆಳಕನ್ನೇ ನಂದಿಸಿದ ಪೋಷಕರು

ಹೈದರಾಬಾದ್: ಸಿಕಂದರಾಬಾದಿನ ಸೇಂಟ್ ಫ್ರಾನ್ಸಿಸ್ ಸ್ಕೂಲ್‍ನ ವಿದ್ಯಾರ್ಥಿನಿಯೊಬ್ಬಳು ಸುಮಾರು 25 ದಿನಗಳ ಕಾಲ ಬರೀ ಒಂದು ಬಾಟಲ್ ಕುದಿಸಿದ ನೀರನ್ನಷ್ಟೇ ಊಟವಾಗಿ ತೆಗೆದುಕೊಂಡು ಬರುತ್ತಿದ್ದಳು. ಈ ವಿಷಯ ಆಕೆಯ ಸ್ನೇಹಿತೆಯರಿಗೆ ಗೊತ್ತಿದ್ದರೂ, ಮಧ್ಯಾಹ್ನವಷ್ಟೇ ಉಪವಾಸ ಮಾಡುತ್ತಿದ್ದಾಳೆಂದು ಸುಮ್ಮನಾಗಿದ್ದರು. ಆದರೆ, ಆಕೆ ಕಳೆದ 25 ದಿನಗಳಿಂದ ಏನೂ ತಿನ್ನದೆ ಶಾಲೆಗೆ ಬರುತ್ತಿದ್ದಾಳೆ. ಆಕೆಗೆ ಕುದಿಸಿ ಆರಿಸಿದ ನೀರೇ ಬೆಳಗಿನ ತಿಂಡಿ, ಮಧ್ಯಾಹ್ನ ಮತ್ತು ರಾತ್ರಿಯ ಊಟವೆಂದು ಯಾರಿಗೂ ಗೊತ್ತಿರಲಿಲ್ಲ. ಈ ವಿಷಯ ತಿಳಿದಿದ್ದುದು ಆಕೆಯ ತಂದೆ-ತಾಯಿ ಮತ್ತು ಹತ್ತಿರದ ಸಂಬಂಧಿಕರಿಗಷ್ಟೇ.

ಜೈನ ಧರ್ಮಕ್ಕೆ ಸೇರಿದ 13 ವರ್ಷದ ಆರಾಧನಾ ಕುಟುಂಬದವರಿಗೆ ಒಳಿತಾಗಲಿ ಎಂದು ಚಾತುರ್ಮಾಸ್ಯ ವ್ರತ ಕೈಗೊಂಡಿದ್ದಳು. ಈ ವ್ರತ ಮುಗಿಯುತ್ತಿದ್ದಂತೆ ಆಕೆಯೂ ಇಹಲೋಕವನ್ನು ತ್ಯಜಿಸಿದ್ದಾಳೆ.

ಸಿಕಂದರಾಬಾದ್‍ನ ಕೋಟ್ ಮಾರ್ಕೆಟ್‍ನಲ್ಲಿ ಜ್ಯುವೆಲ್ಲರಿ ಶಾಪ್‍ ನಡೆಸುತ್ತಿದ್ದ ಲಕ್ಷ್ಮೀಚಂದ್ ಸಮ್ದರಿಯಾ ದಂಪತಿಗೆ ಆರಾಧನಾ ಒಬ್ಬಳೇ ಮಗಳಾಗಿದ್ದು, ಈ ವ್ರತ ಕೈಗೊಳ್ಳುವಂತೆ ಪೋಷಕರೇ ಒತ್ತಾಯಿಸಿದ್ದರು ಎಂಬ ಅಂಶವೂ ಬೆಳಕಿಗೆ ಬಂದಿದೆ. ಉಪವಾಸ ಕೈಗೊಂಡ 25 ದಿನಗಳವರೆಗೂ ಶಾಲೆಗೆ ಹೋಗುತ್ತಿದ್ದ ಆಕೆ 26ನೇ ದಿನದ ಬಳಿಕ‍ ‍ಶಾಲೆಗೆ ಹೋಗುವುದನ್ನು ಬಿಟ್ಟಿದ್ದಳು. ಆದರೆ, ಆಕೆಯ ಪೋಷಕರು ಇದಕ್ಕೆ ವಿರೋಧ ವ್ಯಕ್ತಪಡಿಸಿರಲಿಲ್ಲ. ಮನೆಯಲ್ಲಿ ಬರೀ ನೀರು ಕುಡಿದುಕೊಂಡು, ಟಿವಿ ನೋಡುತ್ತಾ, ಮಲಗಿಕೊಂಡೇ ಸಮಯ ಕಳೆಯುತ್ತಿದ್ದಳು.

508378-aradhana-facebook-web

ಆಕೆಯ ತಾಯಿ ಮತ್ತು ತಾಯಿಯ ಸಹೋದರಿ ಸೇರಿ ಆಕೆಯನ್ನು ದಿನಾಲೂ ಹೊಸ ಬಟ್ಟೆ, ಆಭರಣಗಳಿಂದ ಯುವರಾಣಿಯ ರೀತಿ ರೆಡಿ ಮಾಡಿಸುತ್ತಿದ್ದರು. ಕಳೆದ ವರ್ಷ 34 ದಿನಗಳ ಸಲ್ಲೇಖನ ವ್ರತ ನಡೆಸಿದ್ದಳು ಎನ್ನಲಾಗಿದೆ. 68 ದಿನಗಳ ಸಲ್ಲೇಖನ ವ್ರತ ಮುಗಿಸಿದ ಎರಡು ದಿನಗಳ ಬಳಿಕ ಹೃದಯಾಘಾತದಿಂದ ಆಕೆ ಮೃತಪಟ್ಟಿದ್ದಾಳೆ. ಆಕೆಯ ಅಂತಿಮ ಯಾತ್ರೆಯನ್ನು ‘ಶೋಭಾಯಾತ್ರೆ’ ಎಂಬ ಹೆಸರಿನಲ್ಲಿ ನೂರಾರು ಜನರ ಸಮ್ಮುಖದಲ್ಲಿ ತುಂಬಾ ಅದ್ಧೂರಿಯಾಗಿ ಕೂಡ ಮಾಡಲಾಗಿತ್ತು.

ಅ.4ರಂದು ನಡೆದ ಈ ಪ್ರಕರಣವೂ ತಡವಾಗಿ ಬೆಳಕಿಗೆ ಬಂದಿದ್ದು, ಮಕ್ಕಳಾ ಹಕ್ಕುಗಳ ಎನ್‍ಜಿಒ ಸಂಸ್ಥೆಯೊಂದು ನೀಡಿದ ದೂರಿನಂತೆ ಹೈದರಾಬಾದ್ ಪೊಲೀಸ್ ಆಯುಕ್ತರು ದೂರು ದಾಖಲಿಸಿದ್ದು, ಪ್ರಕರಣದ ತನಿಖೆಗೆ ಆದೇಶಿಸಿದ್ದಾರೆ. ಆರಾಧನಾಳ ತಂದೆ-ತಾಯಿ ಮತ್ತು ಅಜ್ಜ-ಅಜ್ಜಿಯರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಲಾಗಿದೆ.

ಸಲ್ಲೇಖನ ವ್ರತವನ್ನು ಆತ್ಮಹತ್ಯೆ ಯತ್ನವೆಂದು ಪರಿಗಣಿಸಬಹುದು ಈ ಹಿಂದೆ ರಾಜಸ್ಥಾನ ಕೋರ್ಟ್ ಆದೇಶ ನೀಡಿತ್ತು.

Leave a Reply

comments

Related Articles

error: