ಕರ್ನಾಟಕಪ್ರಮುಖ ಸುದ್ದಿ

ಒಂದೇ ಆಡಳಿತ ಸೂರಿನಿಂದ ಬೇರ್ಟಟ್ಟ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ 4 ವಿಭಾಗಗಳು

ಬೆಂಗಳೂರು, ಜೂ.23 : ಕೆಎಸ್‍ಆರ್‍ಟಿಸಿ, ಬಿಎಂಟಿಸಿ ಹಾಗೂ ಉತ್ತರ ಕರ್ನಾಟಕದ ಎರಡು ರಸ್ತೆ ಸಾರಿಗೆ ಸಂಸ್ಥೆಗಳನ್ನು ಒಂದೇ ಆಡಳಿತ ಸೂರಿನಿಂದ ಬೇರ್ಪಡಿಸಿ ನಾಲ್ಕು ಪ್ರತ್ಯೇಕ ಸ್ವಾಯತ್ತ ಸಂಸ್ಥೆಗಳನ್ನಾಗಿ ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ಈ ನಾಲ್ಕು ಸಂಸ್ಥೆಗಳು ಪ್ರಸ್ತುತ ಒಂದೇ ಆಡಳಿತ ವ್ಯಾಪ್ತಿಯಲ್ಲಿವೆ. ಆದರೆ ಇನ್ನು ಮುಂದೆ ತಮ್ಮದೇ ಆಡಳಿತ ಮತ್ತು ಹಣಕಾಸು ಹಂಚಿಕೆ, ನೇಮಕಾತಿ ನಿರ್ಧಾರ ಕೈಗೊಳ್ಳುವ ಅಧಿಕಾರದೊಂದಿಗೆ ಪ್ರತ್ಯೇಕ ಸಂಸ್ಥೆಗಳಾಗಲಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರು ತಿಳಿಸಿದ್ದಾರೆ.

-ಎನ್.ಬಿ.

Leave a Reply

comments

Related Articles

error: