ಮೈಸೂರು

ಸವಿನೆನಪುಗಳನ್ನು ಮೆಲುಕು ಹಾಕಿಸಿದ ಜಾನಪದ ಗೀತೆ

janapada-webಜನಪದಗೀತೆಗಳನ್ನು ಕೇಳೋಕೆ ಮನಸ್ಸಿಗೆ ಹಿತವಾಗತ್ತೆ. ಯಾಕೆಂದರೆ ಅದರಲ್ಲಿ ನಮ್ಮ ಜೀವನಕ್ಕೆ ಸಂಬಂಧಿಸಿದ ಹಲವಾರು ವಿಷಯಗಳು ಅಡಕವಾಗಿರುತ್ತವೆ. ಅಂತಹ ಜಾನಪದ ಗೀತೆಗಳ ಗುಚ್ಛ ಅದ್ಭುತ ಗಾಯಕರ ಕಂಠಸಿರಿಯಿಂದ ಅರಮನೆ ಮುಂಭಾಗದ ವೇದಿಕೆಯಿಂದ ಹೊರಹೊಮ್ಮಿತು.

ದಸರಾ ಉತ್ಸವ ಪ್ರಯುಕ್ತ ಅರಮನೆ ವೇದಿಕೆಯಲ್ಲಿ ಹಮ್ಮಿಕೊಳ್ಳಲಾದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅಪ್ಪಗೆರೆ ತಿಮ್ಮರಾಜು, ಜಯಂತಿ ಶ್ರೀನಿವಾಸ್, ಪ್ರಭಾ ಇನಾಂದಾರ್, ಚಾಮರಾಜನಗರದ ಸಿ.ಎಂ. ನರಸಿಂಹಮೂರ್ತಿ, ಅಮ್ಮ ರಾಮಚಂದ್ರ, ನಿಂಗರಾಜು, ಡಾ. ವೇಮುಗಲ್ ನಾರಾಯಣ ಸ್ವಾಮಿ, ವಿಶ್ವೇಶ್ವರಿ ಹಿರೇಮಠ್, ಬಸವಲಿಂಗ ಹಿರೇಮಠ ಅವರ ಕಂಠ ಸಿರಿಯಿಂದ ಹೊಮ್ಮಿದ ಜಾನಪದ ಗೀತೆಗಳು ಪ್ರೇಕ್ಷಕರಲ್ಲಿ ಹಲವು ಸವಿ ನೆನಪುಗಳನ್ನು ಮೆಲುಕು ಹಾಕಿಸಿತು.

ಬಳಿಕ ಆಂಧ್ರಪ್ರದೇಶದ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರದ ಕಲಾವಿದರು ಪ್ರದರ್ಶಿಸಿದ ಕೂಚುಪುಡಿ ನೃತ್ಯವು ಜನಮನ ಸೂರೆಗೊಂಡರೆ, ಮುಂಬೈ ತಂಡದವರ ಸ್ವರ, ಲಯ, ವಾದ್ಯ ಸಂಗಮ ಹೊಸದೊಂದು ನಾದಲೋಕಕ್ಕೆ ಕರೆದೊಯ್ದಿತು.

Leave a Reply

comments

Related Articles

error: