ಪ್ರಮುಖ ಸುದ್ದಿ

ಸ್ಮಾರ್ಟ್ ಸಿಟಿ ಪಟ್ಟಿಯಲ್ಲಿ ಬೆಂಗಳೂರು: ಸೋನಿಯಾ ಪ್ರತಿನಿಧಿಸುವ ರಾಯ್ ಬರೇಲಿಗಿಲ್ಲ ಸ್ಮಾರ್ಟ್ ಭಾಗ್ಯ

ಪ್ರಮುಖ ಸುದ್ದಿ, ನವದೆಹಲಿ, ಜೂ.೨೩: ಕೇಂದ್ರ ವೆಂಕಯ್ಯನಾಯ್ಡು ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷಿ ಯೋಜನೆಯಾದ ಸ್ಮಾರ್ಟ್ ಸಿಟಿ ಯೋಜನೆಯ ಮೂರನೇ ಹಂತದ ನಗರಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಸಿಲಿಕಾನ್ ಸಿಟಿ ಬೆಂಗಳೂರು ಆಯ್ಕೆಯಾಗಿದೆ.
ಮೊದಲ ಎರಡು ಹಂತದಲ್ಲಿ ಆಯ್ಕೆಯಾಗದೆ ನಿರಾಸೆ ಅನುಭವಿಸಿದ್ದ ಬೆಂಗಳೂರು ಮೂರನೇ ಹಂತದ ಪಟ್ಟಿಯಲ್ಲಿ ಸ್ಥಾನ ಪಡೆಯುವ ಮೂಲಕ ಸ್ಮಾರ್ಟ್ ಭಾಗ್ಯ ಪಡೆದುಕೊಂಡಿದೆ. ಮೂರನೇ ಹಂತದ ಸ್ಮಾರ್ಟ್ ಸಿಟಿ ಯೋಜನೆಗೆ ಒಟ್ಟು ೫೭,೩೯೩ ಕೋಟಿ ರೂ ಹೂಡಿಕೆಯಾಗಲಿದೆ. ವೆಂಕಯ್ಯನಾಯ್ಡು ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಬೆಂಗಳೂರು ಸೇರಿದಂತೆ ೩೦ ನಗರಗಳು ಆಯ್ಕೆಯಾಗಿದ್ದು, ತಿರುವನಂತಪುರಂ, ತ್ರಿವೆಂಡ್ರಂ, ರಾಜ್‌ಪುರ್, ಅಮರಾವತಿ, ಪಾಟ್ನ, ಕರೀಂನಗರ್, ಮುಝಾಫರ್ ಪುರ್, ಪಾಂಡಿಚೇರಿ, ಗಾಂಧಿನಗರ್, ಶ್ರೀನಗರ್, ಸಾಗರ್, ಕರ್ನಲ್, ಸಾಟ್ನಾ, ಬೆಂಗಳೂರು, ಶಿಮ್ಲಾ, ಡೆಹ್ರಾಡೂನ್, ತಿರುಪುರ್, ಪಿಂಪ್ರಿ ಚಿಂಚಾವಾಡ್, ಬಿಲಾಸ್ ಪುರ್, ಪಾಸಿಘಾಟ್, ಜಮ್ಮು, ದಾವೊದ್, ತಿರುನೆಲ್ವೇಲಿ, ತೂತುಕುಡಿ, ತಿರುಚಿನಾಪಳ್ಳಿ, ಜಾನ್ಸಿ, ಐಜಾವಲ್, ಅಲಹಾಬಾದ್, ಅಲಿಗಢ್, ಗ್ಯಾಂಗ್ ಟಕ್ ಸಿಟಿ ಸ್ಥಾನಪಡೆದಿದೆ. ಆದರೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರತಿನಿಧಿಸುವ ರಾಯ್ ಬರೇಲಿ ಕ್ಷೇತ್ರವನ್ನು ಪಟ್ಟಿಯಿಂದ ಕೈಬಿಡಲಾಗಿದೆ. (ವರದಿ ಬಿ.ಎಂ)

Leave a Reply

comments

Related Articles

error: