ಕರ್ನಾಟಕ

ಕೆಪಿಸಿಸಿ ರೈತ ಮತ್ತು ಕಾರ್ಮಿಕ ಘಟಕದ ರಾಜ್ಯಾಧ್ಯಕ್ಷ ಸಚ್ಚಿನ್‍ಮೇಘ ಮೃತ ನಿಂಗೇಗೌಡನ ನಿವಾಸಕ್ಕೆ ಭೇಟಿ

ರಾಜ್ಯ(ಮಂಡ್ಯ)ಜೂ.23:-  ರಾಜ್ಯ ಕೆಪಿಸಿಸಿ ರೈತ ಮತ್ತು ಕಾರ್ಮಿಕ ಘಟಕದ ರಾಜ್ಯಾಧ್ಯಕ್ಷ ಸಚ್ಚಿನ್‍ಮೇಘ ಅವರು ಪಾಂಡವಪುರ ತಾಲೂಕಿನ ಗಾಣದಹೊಸೂರಿನಲ್ಲಿ ಸಾಲಬಾಧೆಯಿಂದ ಆತ್ಮಹತ್ಯೆಮಾಡಿಕೊಂಡಿದ್ದ ರೈತ ನಿಂಗೇಗೌಡ ಅವರ ನಿವಾಸಕ್ಕೆ ಭೇಟಿಕೊಟ್ಟು ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಬಳಿಕ ಮಾತನಾಡಿದ ಅವರು  ರೈತರ ಸಾಲಮನ್ನಾದಿಂದಾಗಿ ರಾಜ್ಯದಲ್ಲಿ ಸಂಭ್ರಮಾಚರಣೆ ನಡೆಯುತ್ತಿದೆ. ಸಾಲಮನ್ನಾದಿಂದ ರಾಜ್ಯ ಸರ್ಕಾರಕ್ಕೆ ಸುಮಾರು 8,317 ಕೋಟಿ ರೂ.ನಷ್ಟು ಹೊರೆಯಾಗಿದೆ. ರೈತರು ಸಂಭ್ರಮಾಚರಣೆ ಮಾಡುವಂತಹ ಸಂದರ್ಭದಲ್ಲಿ ಕಾಂಗ್ರೆಸ್ ಕಿಸಾನ್ ಪಕ್ಷದ ಕಾರ್ಯಕರ್ತರು ರಾಜ್ಯದಲ್ಲಿ ಸಾಲಬಾಧೆಯಿಂದ ಆತ್ಮಹತ್ಯೆಗೆ ಶರಣಾದ ರೈತರ ಮನೆಗೆ ತೆರಳಿ ರೈತ ಕುಟುಂಬಕ್ಕೆ ಸಾಂತ್ವನ ಹೇಳುವ ಕೆಲಸ ಮಾಡುತ್ತಿದ್ದೇವೆ.
ರಾಜ್ಯದಲ್ಲಿ ಸರಕಾರ ಇಂದು ರೈತರ ಸಾಲಮನ್ನಾ ಮಾಡಿದೆ ಎಂದರೆ ಅದು ನಮ್ಮೆಲ್ಲರ ಹೋರಾಟವಲ್ಲ. ರಾಜ್ಯದಲ್ಲಿ ಸಾಲಬಾಧೆ ತಾಳಲಾರದೆ ರೈತರ ಆತ್ಮಹತ್ಯೆಯನ್ನು ತಡೆಯುವ ಉದ್ದೇಶದಿಂದ ಸರಕಾರ ಇಂತಹದೊಂದು ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಕಳೆದ ಎರಡೂವರೆ ವರ್ಷದ ಹಿಂದೆ ತಾಲೂಕಿನ ರೈತ ನಿಂಗೇಗೌಡ ಸಾಲಬಾಧೆಯಿಂದ ಕಬ್ಬಿನ ಗದ್ದೆಗೆ ಬೆಂಕಿಹಾಕಿಕೊಂಡು ಬೆಂಕಿಯೊಳಗೆ ಹಾರಿ ಆತ್ಮಹತ್ಯೆಮಾಡಿಕೊಂಡಿದ್ದರು. ಇದು ಇನ್ನೂ ನಮ್ಮೆಲ್ಲರ ಮನಕಲಕುವಂತಿದೆ ಹಾಗಾಗಿ ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗೆ ತೆರೆಳಿ ಆ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳುವ ಮೂಲಕ ಸಾಲಮನ್ನಾದ ಸಂಭ್ರಮಾಚರಣೆಯನ್ನು ಆಚರಣೆ ಮಾಡುತ್ತಿದ್ದೇವೆ ಎಂದರು.
ಸಂದರ್ಭದಲ್ಲಿ ಕಾಂಗ್ರೆಸ್ ಕಿಸಾನ್ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಸುಭಾಷ್‍ಚಂದ್ರೇಗೌಡ, ಕೋಲಾರ ಜಿಲ್ಲಾಧ್ಯಕ್ಷ ಸಿ.ಆಂಜನಪ್ಪ, ದೇಶಳ್ಳಿ ಮೋಹನ್‍ಕುಮಾರ್, ಗಣೇಶ್, ಶಂಕರ್, ತಾಲೂಕು ಕಿಸಾನ್ ಘಟಕದ ಅಧ್ಯಕ್ಷ ಸಿ.ಆರ್.ರಮೇಶ್,ಮುಖಂಡ ಎಚ್.ಕೃಷ್ಣೇಗೌಡ, ಕೆ.ಕುಬೇರ, ಗ್ರಾ.ಪಂ ಸದಸ್ಯ ಶಿವಕುಮಾರ್, ಸೇರಿದಂತೆ ಹಲವರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: