Uncategorizedಸುದ್ದಿ ಸಂಕ್ಷಿಪ್ತ
ಪೋಷಕರ ಸಮಾವೇಶ-2017 ಕಾರ್ಯಕ್ರಮ: ಜೂ.26 ರಂದು
ಮೈಸೂರು, ಜೂ. 23 : ಎಸ್.ಬಿ.ಆರ್.ಆರ್. ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ಜೂ. 26ರಂದು ಬೆಳಿಗ್ಗೆ 11 ಗಂಟೆಗೆ ಡಾ. ಅಬ್ದುಲ್ಕಲಾಂ ರಜತ ಮಹೋತ್ಸವ ಸಭಾಂಗಣಲ್ಲಿ ಪೋಷಕರ ಸಮಾವೇಶ-2017 ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಬೆಂಗಳೂರಿನ ಉಪ ಕಾರ್ಮಿಕರ ಆಯುಕ್ತ ಡಾ. ಎಸ್.ಬಿ. ರವಿಕುಮಾರ್ ಮಾಡಲಿದ್ದು, ಅಧ್ಯಕ್ಷತೆಯನ್ನು ಪೋಷಕರ ಸಂಘದ ಅಧ್ಯಕ್ಷೆ ಎಸ್.ಶಿಲ್ಪಾ ವಹಿಸಲಿದ್ದಾರೆ. ಕಾಯಕ್ರಮದಲ್ಲಿ ಮಹಾಜನ ಸಂಸ್ಥೆಯ ಅಧ್ಯಕ್ಷ ಆರ್. ವಾಸುದೇವ ಮೂರ್ತಿ, ಗೌರವ ಕಾರ್ಯದರ್ಶಿ ಡಾ. ವಿಜಯಲಕ್ಷ್ಮಿ ಮುರಳೀಧರ್, ಡೀನ್ ಡಾ. ಆರ್ ಮೋಹನಕೃಷ್ಣನ್, ಪೋಷಕರ ಸಂಘದ ಕಾರ್ಯದರ್ಶಿ ಜಿ. ಎಸ್ ಸತೀಶ್ ಉಪಸ್ಥಿತರಿರುತ್ತಾರೆ.