ಮೈಸೂರು

ಇಂದು ಯುವ ದಸರಾಗೆ ತೆರೆ: ಮೈಸೂರಿಗೆ ಆಗಮಿಸಲಿರುವ ಸ್ಯಾಂಡಲ್‍ವುಡ್ ನಟ-ನಟಿಯರ ದಂಡು

ಅ. 3ರ ಕಳೆದ ಸೋಮವಾರದಿಂದ ರಂಗಿನ ಲೋಕದ ಕಲಾವಿದರು ನಡೆಸಿಕೊಟ್ಟ ‘ಯುವ ದಸರಾದ ಬಣ್ಣ ಬಣ್ಣದ’ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಇಂದು (ಅ.9) ತೆರೆ ಬೀಳಲಿದೆ.

ನಗರದ ಮಹಾರಾಜ ಕಾಲೇಜು ಮೈದಾನದ ಬೃಹತ್ ವೇದಿಕೆಯಲ್ಲಿ ಕಳೆದ ಸೋಮವಾರದಿಂದಲೂ ಇಲ್ಲಿಯವರೆಗೆ ಸ್ಯಾಂಡಲ್ ವುಡ್ ನಿಂದ ಬಾಲಿವುಡ್ ವರೆಗೂ ಹಲವಾರು ರಾಷ್ಟ್ರೀಯ-ಅಂತರಾಷ್ಟ್ರೀಯ ಖ್ಯಾತಿಯ ಕಲಾವಿದರು ಗಾಯನ ನೃತ್ಯದ ಮೂಲಕ ಯುವ ಜನತೆಯನ್ನು ಕುಣಿಸಿ ರಂಜಿಸಿ ಮೋಡಿ ಮಾಡಿದ್ದರು. ಇಂದು ನಡೆಯುವ ಸ್ಯಾಂಡಲ್ ವುಡ್ ನೈಟ್ ನೊಂದಿಗೆ 2016ರ ಯುವ ದಸರಾ ಕಾರ್ಯಕ್ರಮಗಳಿಗೆ ಫುಲ್ ಸ್ಟಾಪ್ ನೀಡಲಾಗುತ್ತಿದೆ.

ಇಂದು ನಡೆಯುವ ಸಮಾರೋಪ ಸಮಾರಂಭದಲ್ಲಿ 20ಕ್ಕೂ ಹೆಚ್ಚು ನಟ-ನಟಿಯರು ಪಾಲ್ಗೊಂಡು ಕನ್ನಡಿಗರನ್ನು ರಂಜಿಸಲಿದ್ದಾರೆ. ಸಮಾರೋಪ ಸಮಾರಂಭದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್, ದಿಗಂತ್, ಐಂದ್ರಿತಾ ರೈ, ಚಿರಂಜೀವಿ ಸರ್ಜಾ, ಮಜಾ ಟಾಕೀಸ್ ಖ್ಯಾತಿಯ ಸೃಜನ್ ಲೋಕೇಶ್, ರನ್ನ ಸಿನಿಮಾ ನಾಯಕಿ ರಚಿತ ರಾಮ್, ಹರಿಪ್ರಿಯ, ತುಪ್ಪದ ಹುಡುಗಿ ರಾಗಿಣಿ ದ್ವಿವೇದಿ, ಪರಮಾತ್ಮ ಸಿನಿಮಾದ ದೀಪಾ ಸನ್ನಿಧಿ, ಪಾರೋಲ್ ಯಾದವ್, ಹಾಸ್ಯ ನಟ ಹಾಗೂ ಸಂಗೀತ ನಿರ್ದೇಶಕ ಸಾಧು ಕೋಕಿಲಾ, ಖಳನಟ ರವಿಶಂಕರ್, ಸುಮಂತ್, ಶ್ರೀನಗರ ಕಿಟ್ಟಿ, ಹಾಸ್ಯನಟ ಚಿಕ್ಕಣ್ಣ ಹಾಗೂ ಹಲವಾರು ಸ್ಯಾಂಡಲ್ ವುಡ್ ನ ನಟ-ನಟಿಯರ ದಂಡೇ ಮೈಸೂರಿಗೆ ಬರಲಿದ್ದು ವೈಭವದ ತಾರಾ ಮೆರುಗಿನೊಂದಿಗೆ ಈ ವರ್ಷದ ಯುವ ದಸರಾಗೆ ತೆರೆ ಬೀಳಲಿದೆ.

Leave a Reply

comments

Related Articles

error: