ಪ್ರಮುಖ ಸುದ್ದಿಮೈಸೂರು

ಅನುಮತಿಯಿಲ್ಲದೆ ಮತ್ತೊಂದು ಡ್ರೋಣ್ ಹಾರಾಟ: ಕ್ಯಾಮೆರಾವನ್ನು ವಶಕ್ಕೆ ಪಡೆದ ಪೊಲೀಸರು

ಪ್ರಸ್ತುತ ಡ್ರೋಣ್ ಕ್ಯಾಮೆರಾ ಬಳಕೆ ಹೆಚ್ಚಾಗಿದ್ದು, ಮೈಸೂರು ದಸರಾದಲ್ಲಿ ಭದ್ರತೆಯ ದೃಷ್ಟಿಯಿಂದ ಡ್ರೋಣ್ ಕ್ಯಾಮೆರಾ ಬಳಸುವುದನ್ನು ನಿಷೇಧಿಸಲಾಗಿತ್ತು. ಆದರೆ, ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿ ಯಾವುದೇ ಪೂರ್ವಾನುಮತಿಯಿಲ್ಲದೆ, ವ್ಯಕ್ತಿಯೊಬ್ಬ ಡ್ರೋಣ್‍ ಬಳಸಿದ್ದು, ಪೊಲೀಸರು ಆತನನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಡ್ರೋಣ್ ಹಾರಾಟ ಕಂಡ ತಕ್ಷಣ ಕೆಳಗಿಳಿಸುವಂತೆ ಸೂಚನೆ ನೀಡಿದ ನಜರಬಾದ್ ಪೊಲೀಸರು, ಕ್ಯಾಮೆರಾ ಮತ್ತು ಅದರ ಪರಿಕರಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಕಳೆದ ವಾರ ಪ್ರವಾಸಿಗರ ತಂಡವೊಂದು ಅನುಮತಿ ಇಲ್ಲದೆ, ದಸರಾ ವಸ್ತುಪ್ರದರ್ಶನ ಮೈದಾನದಲ್ಲಿ ಡ್ರೋಣ್‍ ಬಳಿಸಿದ್ದು, ಆ ವೇಳೆ ಸ್ಥಳಕ್ಕಾಗಮಿಸಿದ ಪೊಲೀಸರು ಕ್ಯಾಮೆರಾ ವಶಪಡಿಸಿಕೊಂಡಿದ್ದರು.

Leave a Reply

comments

Related Articles

error: