ಕರ್ನಾಟಕ

ಒಂದು ಧರ್ಮದ ಸಂಸ್ಕೃತಿ ಆಚಾರ-ವಿಚಾರಗಳನ್ನು ಸಮಾಜದ ಇತರೆ ಧರ್ಮಗಳು ಗೌರವಿಸಬೇಕು : ಎಚ್.ಮಂಜುನಾಥ್

ರಾಜ್ಯ(ಮಂಡ್ಯ)ಜೂ.23:- ಪಾಂಡವಪುರ ಪಟ್ಟಣದ ಹಳೇ ಬಸ್ ನಿಲ್ದಾಣದ ದೊಡ್ಡ ಮಸೀದಿಯಲ್ಲಿ ಮುಸ್ಲಿಂ ಸಮುದಾಯದವರಿಗೆ ಕಾಂಗ್ರೆಸ್ ಮುಖಂಡ ಎಚ್.ಮಂಜುನಾಥ್ ಇಫ್ತಿಯಾರ್ ಕೂಟ ಏರ್ಪಡಿಸಿ ಮುಸ್ಲಿಂ ಸಮುದಾಯದ ಮುಖಂಡರೊಂದಿಗೆ ಕುಳಿತು ಸಹಭೋಜನ ಸ್ವೀಕರಿಸಿದರು.
ನಂತರ ಮಾತನಾಡಿದ ಕಾಂಗ್ರೆಸ್ ಮುಖಂಡ ಎಚ್.ಮಂಜುನಾಥ್,ಹಿಂದೂ-ಮುಸ್ಲಿಂ ಸಮುದಾಯದ ಎಲ್ಲರು ಅಣ್ಣತಮ್ಮಂದಿರಂತೆ ಶಾಂತಿ, ಸಹಬಾಳ್ವೆಯಿಂದ ನೆಮ್ಮದಿಯ ಜೀವನ ನಡೆಸಬೇಕು. ಎಲ್ಲಾ ಧರ್ಮಗಳೂ ಶಾಂತಿ, ಸಹಬಾಳ್ವೆ, ಸೌಹಾರ್ದತೆಯನ್ನು ಭೋದಿಸುತ್ತವೆ. ಆದರೆ ಧರ್ಮದ ಸಾರವನ್ನು ಆರ್ಥೈಸಿಕೊಂಡು ಒಗ್ಗೂಡಿ ನಡೆಯಬೇಕಾದ ಅಗತ್ಯವಿದೆ. ಒಂದು ಧರ್ಮದ ಸಂಸ್ಕೃತಿ ಆಚಾರ-ವಿಚಾರಗಳನ್ನು ಸಮಾಜದ ಇತರೆ ಧರ್ಮಗಳು ಗೌರವಿಸಬೇಕು ಎಂದು ಹೇಳಿದರು.
ಸಂದರ್ಭದಲ್ಲಿ ಮನ್‍ಮುಲ್ ಉಪಾಧ್ಯಕ್ಷ ಜಿ.ಇ.ರವಿಕುಮಾರ್, ತಾಪಂ ಸದಸ್ಯ ರಾಮೇಗೌಡ, ಮುಖಂಡರಾದ ಗುರುಮೂರ್ತಿ, ಮಹೇಶ್, ಎಲ್.ಶಿವಯ್ಯ, ಮಸೀದಿಯ ಅಧ್ಯಕ್ಷ ಮಹಮದ್ ಹನೀಫ್(ಪಾಪು), ಉಪಾಧ್ಯಕ್ಷ ಸಮಿಉಲ್ಲಾ, ಮುಜಾಹಿದ್‍ಆಜಿ, ಗೌಸ್‍ಫಾಷ, ನಜೀರ್ ಸೇರಿದಂತೆ ಹಲವರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: