ಮೈಸೂರು

ಸೈಕಲ್ ಜಾಥಾಕ್ಕೆ ಚಾಲನೆ

ಕ್ರೀಡಾ ದಸರಾ ಅಂಗವಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಭಾನುವಾರ ಬೆಳಿಗ್ಗೆ ಮೈಸೂರಿನ  ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿ ಸೈಕಲ್ ಜಾಥಾಕ್ಕೆ ಚಾಲನೆ ನೀಡಲಾಯಿತು.

ಪುರುಷರು, ಮಹಿಳೆಯರು, ಮಕ್ಕಳು ಎಂದು ಮೂರು ವಿಭಾಗ ಮಾಡಲಾಗಿದ್ದು, ಪುರುಷರಿಗೆ 100 ಕಿ.ಮೀ, ಮಹಿಳೆಯರಿಗೆ 50 ಕಿಮೀ, ಮಕ್ಕಳಿಗೆ 5 ಕಿಮೀ ಅಂತರದ ಗುರಿ ನಿಗದಿಗೊಳಿಸಲಾಗಿತ್ತು. 150ಕ್ಕೂ ಹೆಚ್ಚು ಜನರು ಸೈಕಲ್ ಜಾಥಾದಲ್ಲಿ ಪಾಲ್ಗೊಂಡಿದ್ದರು. ಚಾಮುಂಡಿ ವಿಹಾರ ಸ್ಟೇಡಿಯಂನಿಂದ ಹೊರಟ ಸೈಕಲ್ ಜಾಥಾ ರಿಂಗ್ ರೋಡ್ ಮೂಲಕ ಸಾಗಿ ಚಾಮುಂಡಿ ಬೆಟ್ಟದಲ್ಲಿ ಮುಕ್ತಾಯಗೊಂಡಿತು.

ಬೆಂಗಳೂರು, ಮಡಿಕೇರಿ, ಮೈಸೂರು ಜಿಲ್ಲೆಗಳ ಸಾಹಸಪ್ರಿಯರು ಸೈಕಲ್ ಜಾಥಾದಲ್ಲಿ ಪಾಲ್ಗೊಂಡಿದ್ದರು. ಕ್ರೀಡಾ ಇಲಾಖೆಯ ಉಪನಿರ್ದೇಶಕ ಸುರೇಶ್ ಜಾಥಾಕ್ಕೆ ಚಾಲನೆ ನೀಡಿದರು.

Leave a Reply

comments

Related Articles

error: