ಪ್ರಮುಖ ಸುದ್ದಿ

ಚೀನಾದಲ್ಲಿ ಭೂ ಕುಸಿತ: 100ಕ್ಕೂ ಹೆಚ್ಚು ಮಂದಿ ಜೀವಂತ ಸಮಾಧಿ

ಪ್ರಮುಖ ಸುದ್ದಿ, ಬೀಜಿಂಗ್, ಜೂ.24: ಭೀಕರ ಭೂಕುಸಿತದಿಂದಾಗಿ ಸುಮಾರು 100ಕ್ಕೂ ಹೆಚ್ಚು ಮಂದಿ ಜೀವಂತವಾಗಿ ಸಮಾಧಿಯಾಗಿರುವ ಘಟನೆ ನೈರುತ್ಯ ಚೀನಾದ ಸಿಚುವಾನ್ ಪ್ರಾಂತ್ಯದಲ್ಲಿ ಶನಿವಾರ ಮುಂಜಾನೆ ನಡೆದಿದೆ.

ನೈರುತ್ಯ ಚೀನಾದ ಸಿಚುವಾನ್ ಪ್ರಾಂತ್ಯದ ಕ್ಸಿನ್ ಮೋ ಗ್ರಾಮದ ಗುಡ್ಡ ಕುಸಿದ ಪರಿಣಾಮ ಅಲ್ಲಿದ್ದ ಸುಮಾರು 40ಕ್ಕೂ ಹೆಚ್ಚು ಮನೆಗಳು ಕುಸಿದಿವೆ. ಇದರಿಂದ ಮನೆಯೊಳಗಿದ್ದ ಸುಮಾರು 100ಕ್ಕೂ ಅಧಿಕ ಮಂದಿ ಮಣ್ಣಿನ ಅವಶೇಷಗಳಡಿಯಲ್ಲಿ ಸಿಲುಕಿ ಜೀವಂತವಾಗಿ ಸಮಾಧಿಯಾಗಿದ್ದಾರೆ. ವಿಷಯ ತಿಳಿಯುತಿದ್ದಂತೆ ಸ್ಥಳಕ್ಕೆ ಧಾವಿಸಿದ ಚೀನಾದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಸುಮಾರು 1 ಕಿ.ಮೀ ವರಗೂ ಮಣ್ಣಿನ ರಾಶಿ ಕುಸಿದಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಅವಶೇಷಗಳಡಿ ಇನ್ನೂ ಅನೇಕರು ಸಿಲುಕಿರುವ ಶಂಕೆಯಿದ್ದು, ಸಾವುನೋವುಗಳು ಹೆಚ್ಚಾಗುವ ಸಾಧ್ಯತೆ ಇದೆ. (ವರದಿ ಬಿ.ಎಂ)

Leave a Reply

comments

Related Articles

error: