ಕ್ರೀಡೆಪ್ರಮುಖ ಸುದ್ದಿ

ಟೀಂ ಇಂಡಿಯಾ ಕೋಚ್ ಸ್ಥಾನ: ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

ಪ್ರಮುಖ ಸುದ್ದಿ, ನವದೆಹಲಿ, ಜೂ.24: ಕೋಚ್ ಸ್ಥಾನಕ್ಕೆ ಅನಿಲ್ ಕುಂಬ್ಳೆ ರಾಜೀನಾಮೆ ನೀಡಿದ ಬಳಿಕ ಟೀಂ ಇಂಡಿಯಾಗೆ ನೂತನ ಸಾರಥಿ ಹುಡುಕಾಟದಲ್ಲಿರುವ ಬಿಸಿಸಿಐ ಅರ್ಜಿ ಸಲ್ಲಿಸುವ ಅವಧಿಯನ್ನು ವಿಸ್ತರಿಸಿದೆ.

ಅರ್ಜಿ ಸಲ್ಲಿಕೆಗೆ ನಿಗದಿ ಮಾಡಿದ್ದ ಗಡುವು ಮುಗಿದರೂ ಸೂಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸದ ಹಿನ್ನೆಲೆಯಲ್ಲಿ ಗಡುವನ್ನು ಜು.9ರವರೆಗೆ ವಿಸ್ತರಿಸಿದೆ. ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್, ಕರ್ನಾಟಕದ ಮಾಜಿ ಆಟಗಾರ ದೊಡ್ಡ ಗಣೇಶ್, ಲಾಲ್ ಚಂದ್ ರಜಪೂತ್, ಟಾಮ್ ಮೂಡಿ ಮತ್ತು ರಿಚರ್ಡ್ ಪೈಬುಸ್ ಸೇರಿದಂತೆ ಹಲವು ಮಾಜಿ ಕ್ರಿಕೆಟಿಗರು ಅರ್ಜಿ ಸಲ್ಲಿಸಿದ್ದಾರೆ. ಆದರೆ ಈ ಅರ್ಜಿಗಳ ಹೊರತಾಗಿಯೂ ಬಿಸಿಸಿಐಗೆ ಸೂಕ್ತ ಅಭ್ಯರ್ಥಿ ದೊರೆಯುತ್ತಿಲ್ಲವಂತೆ.

ರವಿಶಾಸ್ತ್ರಿ ಅರ್ಜಿ ಸಲ್ಲಿಕೆ ಕುರಿತು ಪ್ರತಿಕ್ರಿಯಿಸಿ, ತಮ್ಮನ್ನು ಕೋಚ್ ಆಗಿ ಆಯ್ಕೆ ಮಾಡುವ ಭರವಸೆ  ನೀಡಿದರಷ್ಟೇ ಅರ್ಜಿ ಸಲ್ಲಿಸುವುದಾಗಿ ಷರತ್ತು ವಿಧಿಸಿದ್ದಾರೆ. ಕಳೆದ ಭಾರಿಯೂ ಟೀಂ ಇಂಡಿಯಾ ಕೋಚ್ ಸ್ಥಾನಕ್ಕಾಗಿ ರವಿಶಾಸ್ತ್ರಿ ಅರ್ಜಿ ಸಲ್ಲಿಕೆ ಮಾಡಿದ್ದರಾದರೂ, ಅಂದು ಕೋಚ್ ಹುದ್ದೆಯ ಆಕಾಂಕ್ಷಿಗಳ ಸಂದರ್ಶನ ಪಡೆದ ಸಿಎಸಿ ಸದಸ್ಯರಾದ ಸಚಿನ್, ಗಂಗೂಲಿ ಮತ್ತು ಲಕ್ಷ್ಮಣ್ ಕುಂಬ್ಳೆ  ಅವರನ್ನು  ನೂತನ ಕೋಚ್ ಆಗಿ ಆಯ್ಕೆ ಮಾಡಿದ್ದರು. ಅಂದಿನ ಕೋಚ್ ಆಯ್ಕೆ ಪ್ರಕ್ರಿಯೆ ವೇಳೆ ಶಾಸ್ತ್ರಿ ಅವರ 2 ವರ್ಷಗಳ ನಿರ್ದೇಶಕ ಸ್ಥಾನದ ಅನುಭವದ ಹೊರತಾಗಿಯೂ ಶಾಸ್ತ್ರಿ ಅವರನ್ನು ಪಕ್ಕಕ್ಕಿಟ್ಟು, ಕುಂಬ್ಳೆ ಅವರನ್ನು ಕೋಚ್ ಆಗಿ ಆಯ್ಕೆ ಮಾಡಲಾಗಿತ್ತು. ಇದೀಗ ಸೂಕ್ತ ಅಭ್ಯರ್ಥಿಯ ಹುಡುಕಾಟದಲ್ಲಿರುವ ಬಿಸಿಸಿಐ ಬಿಗ್ ಬಾಸ್ ಗಳು ಯಾರನ್ನು ಕೋಚ್ ಆಗಿ ಆಯ್ಕೆ ಮಾಡಲಿದ್ದಾರೆ ಕಾದು ನೋಡಬೇಕು. (ವರದಿ ಬಿ.ಎಂ)

Leave a Reply

comments

Related Articles

error: