ಮೈಸೂರು

ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಮೈಸೂರಿನಲ್ಲಿ ವಿವಿಧ ಕಾಮಗಾರಿಗಳಿಗೆ ಭಾನುವಾರ ಚಾಲನೆ ನೀಡಿದರು.

ಯಾದವಗಿರಿಯ ಜಾವಾ ಮುಖ್ಯರಸ್ತೆ, ಜಾವಾ ಹೆದ್ದಾರಿ ವೃತ್ತದ ಬಳಿಯಿರುವ ಕಾರಂಜಿ, ಎ.ರಾಮಣ್ಣ ಸರ್ಕಲ್ ಅನ್ನು ಉದ್ಘಾಟಿಸಿದರು.

ಕಾಮಗಾರಿಗಳ ವೆಚ್ಚ: ಹೈವೇ ವೃತ್ತದಿಂದ ಜಾವಾ ಫ್ಯಾಕ್ಟರಿಗೆ ಹೋಗುವ ರಸ್ತೆಯನ್ನು(ಸಂಕಲ್ಪ ಅಪಾರ್ಟ್‍ಮೆಂಟ್‍ವರೆಗೆ) ಸಿಮೆಂಟ್ ಕಾಂಕ್ರೀಟ್ ಚರಂಡಿ, ಡೆಕ್ ಸ್ಲ್ಯಾಬ್ ಮತ್ತು ಡಾಂಬರೀಕರಣ ಮಾಡುವ ಕಾಮಗಾರಿ. ಇದರ ಅಂದಾಜು ವೆಚ್ಚ 250 ಲಕ್ಷಗಳು.

ಸಯ್ಯಾಜಿರಾವ್ ರಸ್ತೆಯ ಹೈವೇ ವೃತ್ತವನ್ನು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸುವ ಕಾಮಗಾರಿ.

ಬ್ರಹ್ಮಶ್ರೀ ಗುರುನಾರಾಯಣ ರಸ್ತೆಯನ್ನು ರೈಲ್ವೆ ಕೆಳ ಸೇತುವೆಯಿಂದ ದೋಭಿಘಾಟ್‍ವರೆಗೆ ಸಿಮೆಂಟ್ ಕಾಂಕ್ರಿಟ್ ಚರಂಡಿ ಹಾಗೂ ಡಾಂಬರೀಕರಣ ಮಾಡುವ ಕಾಮಗಾರಿ. ಇದರ ಅಂದಾಜು ವೆಚ್ಚ 96.76 ಲಕ್ಷ ರು.

ರಸ್ತೆಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಡಾ. ಎಚ್.ಸಿ. ಮಹದೇವಪ್ಪ ಅವರು, ಪಾಲಿಕೆ ಮತ್ತು ಮೂಡಾ ಅಧಿಕಾರಿಗಳು ರಸ್ತೆಯನ್ನು ತುಂಬಾ ಉತ್ತಮವಾಗಿ ರೂಪಿಸಿದ್ದಾರೆ. ಮುಖ್ಯ ರಸ್ತೆಗಳಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ಸಂಚಾರಕ್ಕೆ ಅಯೋಗ್ಯವಾಗಿತ್ತು. ಮಳೆಗಾಲದಲ್ಲಂತೂ ಇಲ್ಲಿ ನಡೆದುಕೊಂಡು ಹೋಗುವುದು ಅಸಾಧ್ಯವಾಗಿತ್ತು. ಇದೀಗ ಅಧಿಕಾರಿಗಳು ಕಾಳಜಿ ವಹಿಸಿ ರಸ್ತೆ ಅಭಿವೃದ್ಧಿ ಮಾಡಿದ್ದಾರೆ. ಬನ್ನಿಮಂಟಪಕ್ಕೆ ತೆರಳಲು ಇದು ಸಮೀಪದ ರಸ್ತೆಯಾಗಿದ್ದು, ಲೋಕಾರ್ಪಣೆಗೊಳಿಸಿ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತಗೊಳಿಸಲಾಗಿದೆ ಎಂದರು.

ಗ್ರ್ಯಾಂಡ್ ಹೋಟೆಲಿನಿಂದ ಜಾವಾ ಫ್ಯಾಕ್ಟರಿವರೆಗಿನ ರಸ್ತೆಯನ್ನು ಹೋಟೆಲ್ ಮಾಲೀಕರಾದ ಸಚಿನ್ ಮಲ್ಲೋತ್ರ ಅವರು ಸ್ವಂತ ಖರ್ಚಿನಲ್ಲಿ ನಿರ್ಮಿಸಿದ್ದು, ಸಾರ್ವಜನಿಕರ ಉಪಯೋಗಕ್ಕೆ ಲೋಕಾರ್ಪಣೆ ಮಾಡಿದರು.

ಮೈಸೂರು ಮಹಾನಗರ ಪಾಲಿಕೆ ಮೇಯರ್ ಬಿ.ಎಲ್. ಭೈರಪ್ಪ, ಪಾಲಿಕೆ ಸದಸ್ಯರು, ಮೂಡಾ ಸದಸ್ಯರು, ಮೊದಲಾದವರು ಉಪಸ್ಥಿತರಿದ್ದರು.

Leave a Reply

comments

Related Articles

error: