ಕರ್ನಾಟಕಪ್ರಮುಖ ಸುದ್ದಿಮೈಸೂರು

ಮುಂಗಾರು ನಿರೀಕ್ಷಿತ ಪ್ರಮಾಣದಲ್ಲಿ ಆಗದ ಹಿನ್ನೆಲೆ : ಮುಂದಿನ ತಿಂಗಳು ಮೋಡ ಬಿತ್ತನೆ ;ಸಿಎಂ ಸಿದ್ದರಾಮಯ್ಯ

ಪ್ರಮುಖಸುದ್ದಿ, ಮೈಸೂರು,ಜೂ.24:-  ಮುಂಗಾರು ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ ಮುಂದಿನ ತಿಂಗಳು ಮೋಡ ಬಿತ್ತನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಶಾರದಾದೇವಿನಗರದಲ್ಲಿರುವ ತಮ್ಮ ನಿವಾಸದ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಈ ಬಾರಿ ನಾವಂದುಕೊಂಡಂತೆ ಮಳೆಯಾಗುತ್ತಿಲ್ಲ. ಆರಂಭದಲ್ಲಿ ಮಳೆ ಚೆನ್ನಾಗಿಯೇ ಇತ್ತು. ಇದೀಗ ಮಳೆ ಕಡಿಮೆಯಾಗಿದೆ. ಇದೇ ರೀತಿ ಮುಂದುವರಿದರೆ ಮುಂದಿನ ತಿಂಗಳು ಮೋಡ ಬಿತ್ತನೆ ಮಾಡಲಾಗುವುದು ಎಂದರು. ಪರಮೇಶ್ವರ್ ರಾಜೀನಾಮೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು ರಾಜೀನಾಮೆ ಪತ್ರ ರಾಜ್ಯಪಾಲರಿಗೆ ರವಾನೆಯಾಗಿದೆ. ಅದರ ಅಂಗೀಕಾರವಾಗಲಿದೆ. ಶೀಘ್ರವೇ ಸಚಿವ ಸಂಪುಟ ವಿಸ್ತರಣೆಯನ್ನು ಮಾಡುತ್ತೇವೆ. ಯಾವಾಗ, ಹೇಗೆ ಎಂಬುದನ್ನು ಇನ್ನೂ ಚರ್ಚಿಸಿಲ್ಲ ಎಂದರು. ರೈತರ ಸಾಲಮನ್ನಾ ವಿಚಾರ ಕುರಿತು  ಇಂದು ಆದೇಶ ಹೊರಬೀಳಲಿದೆ. ಜೂನ್ 20 ರವರಗೆ ತೆಗೆದುಕೊಂಡಿರುವ ಎಲ್ಲ ಸಾಲ ಮನ್ನಾ ಆಗಲಿದೆ ಎಂದರು.
ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು ಯಾವುದು ಅಪ್ಪ ಮಕ್ಕಳ ಪಕ್ಷ ಅಂತ ಎಲ್ಲರಿಗೂ ತಿಳಿದಿದೆ‌. ನಮ್ಮ‌ಮನೆಯಲ್ಲಿ ಎಷ್ಟು ಜನ ಶಾಸಕರಾಗಿದ್ದಾರೆ.ದೇವೇಗೌಡರ ಮನೆಯಲ್ಲಿ ಎಷ್ಟು ಮಂದಿ ಶಾಸಕರಾಗಿದ್ದಾರೆ ಎಂದು ಪ್ರಶ್ನಿಸಿದರು. ಮಾಜಿ ಸಿಎಂಯಡಿಯೂರಪ್ಪ  ಒಬ್ಬ ಸುಳ್ಳುಗಾರ ಅವರ ಹೇಳಿಕೆಗಳಿಗೆ ಉತ್ತರ ಕೊಡುತ್ತಾ ಕೂರಲು ಸಾಧ್ಯವಿಲ್ಲ ಎಂದರು. ಮೈಸೂರಿನಲ್ಲಿ ಡೆಂಗ್ಯೂ ಉಲ್ಬಣ  ಹಿನ್ನೆಲೆಯಲ್ಲಿ ಮುಂಜಾಗ್ರತೆ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು. ಇದೇ ವೇಳೆ ಮುಖ್ಯಮಂತ್ರಿಗಳ ಅಭಿಮಾನಿಗಳು ಊರ ದೊರೆಗೆ ಮೈಸೂರು ಪೇಟ ತೊಡಿಸಿ, ಬೃಹತ್ ಹಾರ ಹಾಕಿ ಅಭಿನಂದಿಸಿದರು.  (ಆರ್.ವಿ,ಕೆ.ಎಸ್,ಎಸ್.ಎನ್)

Leave a Reply

comments

Related Articles

error: