ದೇಶಪ್ರಮುಖ ಸುದ್ದಿ

ಕನ್ನಡಕ್ಕೆ ಅವಮಾನ ಮಾಡಿದ ಎಚ್‍.ಆರ್. ಮ್ಯಾನೇಜರ್ ಅರೆಸ್ಟ್

ಬೆಂಗಳೂರು, ಜೂ.24 : ಖಾಸಗಿ ಆಸ್ಪತ್ರೆಯೊಂದರ ಹೆಚ್.ಆರ್.ಮ್ಯಾನೇಜರ್ ಒಬ್ಬರನ್ನು ಸಂಜಯ್ ನಗರ ಠಾಣೆ ಪೊಲೀಸರು ಕನ್ನಡ ಭಾಷೆಗೆ ಅವಮಾನ ಮಾಡಿದ ಆರೋಪದ ಮೇಲೆ ಬಂಧಿಸಿದ್ದಾರೆ.

ದೆಹಲಿ ಮೂಲದ ಸಾತ್ವಿಕ್ ಸಚ್ಚಾರ್ ಬಂಧಿತ ಆರೋಪಿ. ಈತ ಜೂನ್ 18 ರಂದು ಆನ್‍ಲೈನ್‍ನಲ್ಲಿ ಫುಡ್ ಆರ್ಡರ್ ಮಾಡಿದ್ದ. ಡೆಲಿವರಿ ಬಾಯ್ ಬಿ.ಎಂ.ಅನಿಲ್ ಅದನ್ನು ಬುಕ್ ಆಗಿದ್ದ ಆಹಾರ ತಂದು ಕೊಟ್ಟಿದ್ದಾರೆ. ಆದರೆ ಅನಿಲ್ ಬರುವುದು 5 ನಿಮಿಷ ತಡವಾದ ಕಾರಣ ಸಾತ್ವಿಕ್ ಗರಂ ಆಗಿದ್ದಾನೆ. ಡೆಲಿವರಿ ಬಾಯ್ ಅನಿಲ್ ಕನ್ನಡದಲ್ಲಿ ತಡವಾಗಿದೆ ಕ್ಷಮಿಸಿ ಎಂದು ವಿನಂತಿಸಿದ್ದಾರೆ.

ಆದರೆ ಇಷ್ಟಕ್ಕೇ ಸುಮ್ಮನಾಗದ ಸಾತ್ವಿಕ್, ಕನ್ನಡ ಭಾಷೆ ಹಾಗೂ ಅನಿಲ್‍ರನ್ನು ವಿಪರೀತ ನಿಂದಿಸಿದ್ದಾನೆ. ಅನಿಲ್ ಈಗ ಸಂಜಯ್ ನಗರ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಾತ್ವಿಕ್‍ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

-ಎನ್.ಬಿ.

Leave a Reply

comments

Related Articles

error: