ಮೈಸೂರು

ಬಿಜೆಪಿಗೆ ವಿಶ್ವ ಕರ್ಮ ಸಮಾಜದ ಬೆಂಬಲ ಕೆ.ಪಿ.ನಂಜುಂಡಿ ಹೇಳಿಕೆಗೆ ಖಂಡನೆ

ಮೈಸೂರು.ಜೂ.24 : ಭಾರತೀಯ ಜನತಾ ಪಕ್ಷಕ್ಕೆ ವಿಶ್ವಕರ್ಮ ಸಮಾಜದ ಬೆಂಬಲವಿದೆ ಎಂದು ಕೆ.ಪಿ.ನಂಜುಂಡಿಯವರು ನೀಡಿರುವ ಹೇಳಿಕೆಯನ್ನು ವಿಶ್ವಕರ್ಮ ಸಮಾಜದ ಮೈಸೂರು ಜಿಲ್ಲಾ ಯುವಘಟಕವೂ ಬಲವಾಗಿ ಖಂಡಿಸಿದೆ.

ಶನಿವಾರ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ವಿಶ್ವಕರ್ಮ ಸಮಾಜದ ಮೈಸೂರು ಜಿಲ್ಲಾ ಮಹಾಮಂಡಲ ಅಧ್ಯಕ್ಷ ಹುಯಿಲಾಳು ಕುಮಾರ್ ಮಾತನಾಡಿ ನಂಜುಂಡಿಯವರು ನೀಡಿರುವ ಏಕಪಕ್ಷೀಯ ಹೇಳಿಕೆಯನ್ನು ಸಮಾಜದ ಹೇಳಿಕೆಯೆಂದು ಬಿಂಭಿಸಲು ಯತ್ನಿಸುತ್ತಿದ್ದು ಅವರೇನು ಸಮಾಜವನ್ನು ಗುತ್ತಿಗೆ ಪಡೆದಿದ್ದಾರೆಯೋ ಎಂದು ಪ್ರಶ್ನಿಸಿದರು.

ವಿಶ್ವ ಕರ್ಮ ಸಮಾಜವನ್ನು ಒಂದೇ ಪಕ್ಷಕ್ಕೆ ಒತ್ತೆ ಇಡಲು ಮುಂದಾಗಿರುವ ನಂಜುಂಡಿಯವರು ಸರ್ವಾಧಿಕಾರಿ ದೋರಣೆ ಅನುಸರಿಸುತ್ತಿದ್ದಾರೆ, ತಮ್ಮ ರಾಜಕೀಯಕ್ಕೆ ಪದೇ ಪದೇ ಸಮಾಜದ ಸ್ವಾಮೀಜಿಗಳನ್ನು ಎಳೆದು ತರುವುದಕ್ಕೆ ವಿಷಾಧಿಸಿ, ಸಮಾಜದ ಆಂತರಿಕ ವಿಷಯಗಳ ಬಗ್ಗೆ ಮಾಧ್ಯಮಗಳಲ್ಲಿ ಹೇಳಿಕೆ ನೀಡುವಾಗ ಜಾಗರೂಕರಾಗಿರಿ ಹಾಗೂ ಸಂಘಟನಾ ವಿಚಾರದಲ್ಲಿ ಮಾರ್ಗದರ್ಶಕರಾಗಿರಿ ಎಂದು ಮನವಿ ಮಾಡಿದರು.

ವಿಧಾನ ಪರಿಷತ್ ಸದಸ್ಯ ರಘು ಆಚಾರ್ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕೆಂದು ಸಿಎಂ ಸಿದ್ದರಾಮಯ್ಯನವರನ್ನು ಇದೇ ವೇಳೆ ಒತ್ತಾಯಿಸಿದರು.

ಯುವ ವೇದಿಕೆ ಅಧ್ಯಕ್ಷ ಕೆಂಡಗಣ್ಣ ವಿಶ್ವಕರ್ಮ, ಗ್ರಾ.ಪಂ.ಸದಸ್ಯ ಮಾದಿಗಳ್ಳಿ ಶಿವಕುಮಾರ್, ಹಿನಕಲ್ ಯೋಗಣ್ಣ, ನಂಜರಾಯ್ಯಯನಹುಂಡಿ ಸೋಮಚಾರ್ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: