ದೇಶಪ್ರಮುಖ ಸುದ್ದಿ

ಅಮೇರಿಕಾದ ‘ಕಾರ್ನೆಜಿ’ ಪ್ರಶಸ್ತಿಗೆ ಅಜೀಂ ಪ್ರೇಮ್ ಜೀ ಆಯ್ಕೆ

ಪ್ರಮುಖ ಸುದ್ದಿ, ನವದೆಹಲಿ, ಜೂ.24 : ಮಾನವೀಯ ಸೇವೆಗಾಗಿ ನೀಡಲಾಗುವ ಅಮೇರಿಕಾದ  ಪ್ರತಿಷ್ಠಿತ ‘ಕಾರ್ನೆಜಿ’ ಪ್ರಶಸ್ತಿಗೆ ವಿಪ್ರೋ ಅಧ್ಯಕ್ಷ ಅಜೀಂ ಪ್ರೇಮ್ ಜೀ ಆಯ್ಕೆಯಾಗಿದ್ದಾರೆ.
ಭಾರತದಲ್ಲಿ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ಸುಧಾರಣೆಗಾಗಿ ಮಾಡಿದ ಪ್ರಯತ್ನಗಳನ್ನು ಗುರುತಿಸಿ ಪ್ರೇಮ್ ಜೀಯವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿಕೊಳ್ಳಲಾಗಿದೆ. 2017 ರ ಕಾರ್ನೆಜಿ ಮಾನವೀಯತೆಯ ಪದಕಕ್ಕೆ ಆಯ್ಕೆಯಾದ 7  ಜನರಲ್ಲಿ ಅಜೀಂ ಪ್ರೇಮ್ ಜೀ ಫೌಂಡೇಶನ್‌ ನ 70 ವರ್ಷದ ಪ್ರೇಮ್ ಜೀ ಕೂಡ ಒಬ್ಬರಾಗಿದ್ದು, ಅಕ್ಟೋಬರ್ ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಪ್ರಶಸ್ತಿ ಆಯ್ಕೆ ಸಮಿತಿ ತಿಳಿಸಿದೆ.
ವಿಪ್ರೋ ಸಂಸ್ಥೆಯನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಬೆಳೆಸಿದ ಪ್ರೇಮ್ ಜೀ, ಸಾರ್ವಜನಿಕ ಶಿಕ್ಷಣದಲ್ಲಿ ಸುಧಾರಣೆ ತರಲು ಸಾಕಷ್ಟು ಯತ್ನ ನಡೆಸಿದ್ದಾರೆ ಎಂದು ಪ್ರಶಸ್ತಿ ಆಯ್ಕೆ ಸಮಿತಿ ಅಭಿಪ್ರಾಯಪಟ್ಟಿದೆ. (ವರದಿ: ಎಲ್.ಜಿ)

Leave a Reply

comments

Related Articles

error: