ಲೈಫ್ & ಸ್ಟೈಲ್ಸುದ್ದಿ ಸಂಕ್ಷಿಪ್ತ

ಅನಾರೋಗ್ಯಕ್ಕೆ ನೀರೇ ಮದ್ದು

ನೀರನ್ನು ಹೆಚ್ಚು ಕುಡಿದಷ್ಟು ಆರೋಗ್ಯ ಉತ್ತಮವಾಗಿರುತ್ತದೆ. ನಮ್ಮ ವಯಸ್ಸು, ದೇಹದ ತೂಕ, ಎತ್ತರಗಳ ಆಧಾರದ ಮೇಲೆ ಎಷ್ಟು ನೀರನ್ನು ಸೇವಿಸಬೇಕು ಎಂಬುದು ನಿರ್ಧಾರವಾಗುತ್ತದೆ.

ಒಬ್ಬ ವ್ಯಕ್ತಿಯು ಆರೋಗ್ಯಕರ ಜೀವನವನ್ನು ನಡೆಸಬೇಕಾದರೆ  ಒಂದು ದಿನದಲ್ಲಿ ಕಡಿಮೆ ಅಂದರೂ 3 ರಿಂದ 4 ಲೀಟರ್ ನೀರನ್ನು ಸೇವಿಸಲೇಬೇಕು. ಪ್ರತಿದಿನವೂ ಬೆಳಗ್ಗೆ ಎದ್ದ ನಂತರ ಮತ್ತು ಊಟಕ್ಕೆ ಅರ್ಧ ಗಂಟೆ ಮೊದಲು, ಊಟವಾದ ಅರ್ಧ ಗಂಟೆಯ ಬಳಿಕ ನೀರನ್ನು ಸೇವಿಸುವುದರಿಂದ ಊಟವನ್ನು ಹಿತಮಿತಯಾಗಿ ಸೇವಿಸಲು ಅನುಕೂಲವಾಗುತ್ತದೆ. ಅಲ್ಲದೆ ಅಜೀರ್ಣ ಸಮಸ್ಯೆಯನ್ನು ದೂರವಾಗಿಸಬಹುದು.  ನಿಮ್ಮ ಮೆದುಳು ಬಹುತೇಕ ನೀರಿನಿಂದಲೂ ಕೂಡಿರುತ್ತದೆ.  ನಿಮಗೆ ಉತ್ತಮವಾದ ಗಮನವನ್ನು ಕೇಂದ್ರೀಕರಿಸಲು ಸಹಕಾರಿಯಾಗುತ್ತದೆ.

ದಪ್ಪಗಿರುವವರು ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆಯಿದೆ. ಬಹುಪಾಲು ಸಮಯ ಅವರು ಆರೋಗ್ಯಕರವಾಗಿದ್ದಾರೆಂದು ಪರಿಗಣಿಸುವುದಿಲ್ಲ. ಜ್ವರ, ಕ್ಯಾನ್ಸರ್ ಮತ್ತು ಹೃದಯಾಘಾತಗಳಂತಹ ಇತರ ಖಾಯಿಲೆಗಳ ವಿರುದ್ಧ ಸಾಕಷ್ಟು ಹೋರಾಟ ಮಾಡುತ್ತಿರುತ್ತಾರೆ. ಅಂಥಹವರು  ಹೆಚ್ಚು ನೀರನ್ನು ಕುಡಿಯುವುದರಿಂದ ಅನಾರೋಗ್ಯವನ್ನು ದೂರವಿಡಬಹುದು.

 

ನೀರು ಸೇವೆನೆಯಿಂದಾಗುವ ಅನುಕೂಲಗಳು :

  1. ದೇಹದ ಶಕ್ತಿ ಹೆಚ್ಚಿಸುತ್ತದೆ ಮತ್ತು ಆಯಾಸವನ್ನು ನಿವಾರಿಸುತ್ತದೆ.
  2. ತೂಕ ಕಡಿಮೆ ಮಾಡಿಕೊಳ್ಳಲು ಉತ್ತೇಜಿಸುತ್ತದೆ.
  3. ಮೂತ್ರಪಿಂಡದ ಕಲ್ಲುಗಳು ಮತ್ತು ಯುಟಿಐಗಳ ಸಮಸ್ಯೆಗಳು ಕಡಿಮೆಯಾಗುವುರ ಜೊತೆಗೆ ಬೆವರು ಮತ್ತು ಮೂತ್ರವಿಸರ್ಜನೆಯ ಮೂಲಕ ತ್ಯಾಜ್ಯವನ್ನು ತೊಡೆದುಹಾಕುತ್ತದೆ.
  4. ನಿಮ್ಮ ಚರ್ಮವನ್ನು ತೇವಗೊಳಿಸುತ್ತದೆ. ತಾಜಾ, ಮೃದುವಾದ, ಸುಕ್ಕು ರಹಿತ ಚರ್ಮಗಳನ್ನು ಹೊಂದಬಹುದು.
  5. ತಲೆನೋವನ್ನು ತಡೆಯಲು ಸಹಾಯ ಮಾಡುತ್ತದೆ.
  6. ದೇಹದಲ್ಲಿ ಸರಿಯಾದ ಜಲ ಸಂಚಯನವಾಗುವುದರಿಂದ ಕೀಲುಗಳನ್ನು ನಯಗೊಳಿಸುತ್ತದೆ ಮತ್ತು ಸ್ನಾಯುಗಳ ಜಂಟಿ ನೋವು ಕಡಿಮೆ ಇರುತ್ತದೆ.

ನೀರನ್ನು ಹೆಚ್ಚು ಹೆಚ್ಚು ಸೇವಿಸುವುದರಿಂದ ದಿನನಿತ್ಯ ಅತ್ಯುತ್ತಮವಾಗಿ ಆನಂದವಾಗಿ ಉತ್ಸಾಹದಿಂದ  ಕಾರ್ಯನಿರ್ವಹಿಸಬಹುದು. (ಪಿ.ಜೆ)

 

Leave a Reply

comments

Related Articles

error: