ಪ್ರಮುಖ ಸುದ್ದಿವಿದೇಶ

ಮೆಕ್ಕಾದಲ್ಲಿ ಮಾನವ ಬಾಂಬರ್ ಹತ್ಯೆ : ರಂಜಾನ್ ಸಮಯದ ವಿಂಧ್ವಂಸಕ ಸಂಚು ವಿಫಲ

ರಿಯಾದ್, ಜೂ.24 : ಮಾನವ ಬಾಂಬ್‍ ಸ್ಫೋಟಿಸಿ ಮೆಕ್ಕಾದಲ್ಲಿ ರಂಜಾನ್ ಪ್ರಾರ್ಥನೆ ವೇಳೆ ನಡೆಸಲು ಉದ್ದೇಶಿಸಲಾಗಿದ್ದ ಭಾರೀ ಅನಾಹುತವೊಂದನ್ನು ಭದ್ರತಾ ಪಡೆಗಳು ಮೊದಲೇ ತಡೆದಿವೆ. ಮಾನವ ಬಾಂಬರ್‍ ತನ್ನನ್ನು ತಾನು ಸ್ಫೋಟಿಸಿಕೊಲ್ಳುವ ಮೊದಲೇ ಹತ್ಯೆ ಮಾಡಲಾಗಿದೆ.

ಮುಸ್ಲಿಮರ ಪವಿತ್ರ ನಗರ ಮೆಕ್ಕಾದ ಬೃಹತ್ ಮಸೀದಿಯ ಬಳಿ ಸ್ಫೋಟಿಸಿಕೊಂಡು ಹೆಚ್ಚಿನ ಜನರನ್ನು ಹತ್ಯೆ ಮಾಡುವುದು ಈ ಬಾಂಬರ್‍ನ ಉದ್ದೇಶವಾಗಿತ್ತು. ಭಯೋತ್ಪಾದಕರ ಭಾರೀ ವಿಧ್ವಂಸಕ ಕೃತ್ಯದ ಸಂಚನ್ನು ಸೌದಿ ಭದ್ರತಾ ಪಡೆಗಳು ವಿಫಲಗೊಳಿಸಿದ್ದು, ಗುಂಡಿನ ಚಕಮಕಿ ವೇಳೆ ಉಗ್ರನೊಬ್ಬ ಮನೆಯೊಳಗೆ ನುಗ್ಗಿ ತನ್ನನ್ನು ತಾನು ಸ್ಫೋಟಿಸಿಕೊಂಡು ಹತನಾಗಿದ್ದಾನೆ. ಈ ಘಟನೆಯಲ್ಲಿ ಅನೇಕರಿಗೆ ಗಾಯಗಳಾಗಿವೆ.

ಇದಲ್ಲದೆ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಭದ್ರತಾಪಡೆಯ ಸಿಬ್ಬಂದಿ ಓರ್ವ ಮಹಿಳೆ ಸೇರಿದಂತೆ ಐವರನ್ನು ಬಂಧಿಸಿದ್ದಾರೆ. ಇದರ ಜೊತೆ ರಂಜಾನ್ ವೇಳೆ ಪವಿತ್ರ ನಗರದಲ್ಲಿ ಸಂಭವಿಸಬಹುದಾಗಿದ್ದ ಉಗ್ರರ ಭಾರೀ ದಾಳಿ ತಪ್ಪಿದಂತಾಗಿದೆ ಎಂದು ಸೌದಿ ಗೃಹ ಸಚಿವಾಲಯದ ಭದ್ರತಾ ವಕ್ತಾರ ಮನ್ಸೂರ್ ಅಲ್ ಟುರ್ಕಿ ಹೇಳಿಕೆಯನ್ನು ಉಲ್ಲೇಖಿಸಿ ಸೌದಿ ಸರ್ಕಾರಿ ಸ್ವಾಮ್ಯದ ಅಲ್ ಅರೇಬಿಯಾ ನ್ಯೂಸ್ ವರದಿ ಮಾಡಿದೆ.

ಮೆಕ್ಕಾ ಮೂಲದವೇ ಆದ ಎರಡು ಭಯೋತ್ಪಾದಕ ಸಂಘಟನೆಗಳು ಹಾಗೂ ಜೆಡ್ಡಾದ ಮೂರನೇ ಉಗ್ರಗಾಮಿ ಬಣ ಮೆಕ್ಕಾದ ಮಸೀದಿ ಮೇಲೆ ದಾಳಿ ಮಾಡಲು ಕುತಂತ್ರ ರೂಪಿಸಿತ್ತು. ಭದ್ರತಾ ಪಡೆಗಳು ಅದನ್ನು ವಿಫಲಗೊಳಿಸಿವೆ. ರಂಜಾನ್ ಸಾಮೂಹಿಕ ಪಾರ್ಥನೆಗಾಗಿ ಮೆಕ್ಕಾದಲ್ಲಿ ಲಕ್ಷಾಂತರ ಮಂದಿ ಸೇರುತ್ತಿದ್ದು, ವ್ಯಾಪಕ ಬಂದೋಬಸ್ತ್ ಮಾಡಲಾಗಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ.

-ಎನ್.ಬಿ.

Leave a Reply

comments

Related Articles

error: