ಮೈಸೂರು

ಪತಿ ಕಾಣೆಯಾಗಿದ್ದಾರೆಂದು ಪತ್ನಿಯಿಂದ ದೂರು ದಾಖಲು

ಮೈಸೂರು,ಜೂ.24:-  ಪಿರಿಯಾಪಟ್ಟಣ ತಾಲೂಕಿನ ಮರಡಿಯೂರು  ಗ್ರಾಮದ ಮಣಿ (35) ಕಾಣೆಯಾಗಿದ್ದಾರೆ, ಜೂ.7ರಂದು ಬೆಳಿಗ್ಗೆ 8.30 ಕ್ಕೆ  ಕೂಲಿ ಕೆಲಸಕ್ಕೆ ಹೋಗುತ್ತೇನೆಂದು ಹೇಳಿ ಹೋದವರು ಮರಳಿ ಮನೆಗೆ ವಾಪಸಗಿಲ್ಲ ಎಂದು ಮಣಿ ಪತ್ನಿ ಕನಕ ಕೋಂ ಮಣಿ ಸ್ಥಳೀಯ ಬೈಲಕುಪ್ಪೆ ಆರಕ್ಷಕ ಠಾಣೆಗೆ ದೂರು ದಾಖಲಿಸಿದ್ದಾರೆ,

ಕಾಣೆಯಾದ ವ್ಯಕ್ತಿಯು 5ಅಡಿ ಎತ್ತರ, ಕೋಲು ಮುಖ, ಗೋಧಿ ಮೈಬಣ್ಣ, ಸದಾಹರಣ ಮೈ ಕಟ್ಟು,  ಬಿಳಿ ಬಣ್ಣದ ಶರ್ಟ್, ಮತ್ತು ಕಪ್ಪು ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿರುತ್ತಾರೆ, ಕನ್ನಡ, ತಮಿಳು, ತೆಲಗು, ಭಾಷೆ ಮಾತನಾಡುತ್ತಾರೆ,  ಇವರ ಬಗ್ಗೆ ಸುಳಿವು ಸಿಕ್ಕಲ್ಲಿ ಬೈಲಕುಪ್ಪೆ ಪೋಲಿಸ್ ಠಾಣೆ-ದೂರವಾಣಿ  ಸಂಖ್ಯೆ 08223-254433, ಮೊಬೈಲ್ 9480805059 ಸಂಪರ್ಕಿಸಲು ಕೊರಲಾಗಿದೆ. (ಆರ್.ಬಿ.ಆರ್,ಎಸ್.ಎಚ್)

Leave a Reply

comments

Related Articles

error: