ಕರ್ನಾಟಕ

ರೈತರ ಸಾಲ ಮನ್ನಾ: ಅಧಿಕೃತ ಆದೇಶ ಪತ್ರ ಪ್ರಕಟ

ಬೆಂಗಳೂರು,ಜೂ.24-ಮುಖ್ಯಮಂತ್ರಿ ಸಿದ್ದರಾಮಯ್ಯ ರೈತರ ಸಾಲ ಮನ್ನಾ ಘೋಷಣೆ  ಹೊರಡಿಸಿದ ಮೂರು ದಿನಗಳಲ್ಲಿ ಇಂದು ಈ ಕುರಿತು ಅಧಿಕೃತ ಆದೇಶವೂ ಹೊರಬಿದ್ದಿದೆ.

ರೈತರ ೫೦ ಸಾವಿರ ರೂ.ಗಳವರೆಗಿನ ಸಾಲ ಮನ್ನಾ ಮಾಡುವುದಾಗಿ ಮುಖ್ಯಮಂತ್ರಿಗಳು ವಿಧಾನಸಭೆಯಲ್ಲಿ ಬುಧವಾರ ಘೋಷಿಸಿದ್ದರು. ಘೋಷಣೆಯ ಮರು ದಿನವೇ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ನಿರ್ಣಯವನ್ನೂ ಅಂಗೀಕರಿಸಲಾಗಿತ್ತು. ಇದೀಗ ಆದೇಶವೂ ಹೊರಬಂದಿದ್ದು, ಸಾಲ ಮನ್ನಾ ಅಧಿಕೃತವಾಗಿ ಜಾರಿಗೆ ಬಂದಿದೆ.

ಉತ್ತರ ಪ್ರದೇಶ, ಪಂಜಾಬ್, ಮಹಾರಾಷ್ಟ್ರ ಮತ್ತಿತರ ರಾಜ್ಯಗಳಲ್ಲಿ ಸಾಲ ಮನ್ನಾ ಘೋಷಣೆಯಾಗಿದ್ದರೂ ಈ ವರೆಗೆ ಆದೇಶ ಪತ್ರ ಹೊರ ಬಂದಿಲ್ಲ. (ವರದಿ-ಎಸ್.ಎನ್, ಎಂ.ಎನ್)

 

Leave a Reply

comments

Related Articles

error: