ಮೈಸೂರು

ಸ್ನೇಹ ವಿದ್ಯಾಭ್ಯಾಸಕ್ಕೆ ನೆರವಾದ ಒಳ್ಳೆ ಹುಡುಗ ಪ್ರಥಮ್

ಮೈಸೂರು,ಜೂ.24-ಮಗಳ ವಿದ್ಯಾಭ್ಯಾಸದ ಶುಲ್ಕ ಕಟ್ಟಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದ ನಗರದ ಬೃಂದಾವನ ಬಡಾವಣೆಯ ಗಂಗಾಧರ್ ಅವರ ಮನೆಗೆ ಬಿಗ್ ಬಾಸ್ ರಿಯಾಲಿಟಿ ಶೋನ ವಿಜೇತ ಪ್ರಥಮ್ ಭೇಟಿ ನೀಡಿ ಕುಟುಂಬದವರಿಗೆ ಸ್ವಾಂತನ ಹೇಳಿದರು.

ಗಂಗಾಧರ್ ಅವರ ಪುತ್ರಿ ಸ್ನೇಹಗೆ ಸಮಾಧಾನ ಹೇಳಿದ ಪ್ರಥಮ್ ಆಕೆ ವ್ಯಾಸಂಗ ಪೂರ್ಣಗೊಳಿಸಲು ನೆರವಾಗುವಂತೆ 25 ಸಾವಿರ ರೂ.ನ ಚೆಕ್ ವಿತರಿಸಿದರಲ್ಲದೆ, ಮುಂದಿನ ವ್ಯಾಸಂಗಕ್ಕೂ ಧನ ಸಹಾಯ ಮಾಡುವ ಭರವಸೆ ನೀಡಿದರು. ಸ್ನೇಹ ಅಂತಿಮ ವರ್ಷದ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದಾರೆ.

ಈ ಸಂದರ್ಭದಲ್ಲಿ ನಗರಪಾಲಿಕೆ ಸದಸ್ಯ ಸ್ನೇಕ್ ಶ್ಯಾಮ್ ಉಪಸ್ಥಿತರಿದ್ದರು. (ವರದಿ-ಆರ್.ವಿ, ಎಂ.ಎನ್)

Leave a Reply

comments

Related Articles

error: