ಮೈಸೂರು

ಅಧೀಕ್ಷಕರಾಗಿ ಸತೀಶ್ ಅವರನ್ನೇ ನೇಮಿಸುವಂತೆ ಒತ್ತಾಯಿಸಿ ಪ್ರತಿಭಟನೆ

ಮೈಸೂರು, ಜೂ.೨೪: ಅಧೀಕ್ಷಕರಾಗಿ ಸತೀಶ್ ಅವರನ್ನೇ ನೇಮಿಸುವಂತೆ ಒತ್ತಾಯಿಸಿ ಸರ್ಕಾರಿ ಅಂಧ ಮಕ್ಕಳ ಶಾಲೆ ವಿದ್ಯಾರ್ಥಿಗಳು ಮತ್ತು ಪೋಷಕರು ಪ್ರತಿಭಟನೆ ನಡೆಸಿದರು.
ಶನಿವಾರ ತಿಲಕ್‌ನಗರದಲ್ಲಿರುವ ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪೋಷಕರೊಂದಿಗೆ ಪ್ರತಿಭಟನೆ ನಡೆಸಿದರು. ಇಲ್ಲಸಲ್ಲದ ಆರೋಪಿ ಹೊರಿಸಿ ಸತೀಶ್ ಅವರನ್ನು ಹುದ್ದೆಯಿಂದ ಬಿಡುಗಡೆಗೊಳಿಸಿರುವುದು ಖಂಡನೀಯ. ಕೂಡಲೇ ಸತೀಶ್ ಅವರನ್ನು ಅಧೀಕ್ಷಕರನ್ನಾಗಿ ಮರು ನೇಮಕ ಮಾಡಬೇಕು. ಅವರು ಅಧೀಕ್ಷಕರಾಗಿ ನೇಮಕವಾದ ಬಳಿಕ ಅನೇಕ ಉತ್ತಮ ಕಾರ್ಯಗಳನ್ನು ಮಾಡಿದ್ದು, ಅದನ್ನು ಮುಂದುವರಿಸಿಕೊಂಡು ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.
ಸತೀಶ್ ಅವರು ಅಧೀಕ್ಷಕರಾಗಿ ನೇಮಕಗೊಂಡ ಬಳಿಕ ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸಿದ್ದಾರೆ. ಅವರ ವಿರುದ್ಧ ಅಂಧರ ಸಂಘದ ಕೆಲವರು, ಹಿರಿಯ ವಿದ್ಯಾರ್ಥಿಗಳು ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ದೊಡ್ಡಮಾರಗೌಡನಹಳ್ಳಿ ಪರಿಸರವಾದಿ ಸಿ.ನಾಗಣ್ಣ, ಮಕ್ಕಳ ಹಕ್ಕುಗಳ ಹೋರಾಟಗಾರ ಈ.ಧನಂಜಯ ಎಲಿಯೂರು, ಪೋಷಕರಾದ ನಾಗಮ್ಮ, ಗೋಪಾಲ್, ನಾಗೇಂದ್ರ, ಮರಿಯಪ್ಪ, ಸುಮ, ಬಿ.ಸಿದ್ದರಾಮ, ವಿದ್ಯಾರ್ಥಿಗಳಾದ ಧನುಷ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು. (ವರದಿ ಬಿ.ಎಂ)

Leave a Reply

comments

Related Articles

error: