ಮೈಸೂರು

ಮಾವುತರು, ಕಾವಾಡಿಗರ ಗೌರವಧನ ಹೆಚ್ಚಳ

ಮೈಸೂರು ಜಿಲ್ಲಾಡಳಿತವು ಮಾವುತರು ಮತ್ತು ಕಾವಾಡಿಗರಿಗೆ ಕೊಡುವ ಗೌರವಧನವನ್ನು 5 ಸಾವಿರ ರೂಗಳಿಂದ 7,500 ರೂಗಳಗೆ ಹೆಚ್ಚಿಸಿದೆ.ಅರಮನೆ ಮಂಡಳಿಯ ಕಾರ್ಯನಿರ್ವಾಹಕ ಅಧಿಕಾರಿಯೂ ಆದ ಜಿಲ್ಲಾಧಿಕಾರಿ ಡಿ.ರಣದೀಪ್ ಅವರು ಪತ್ರಿಕಾ ಪ್ರಕಟಣೆ ಮೂಲಕ ಈ ವಿಷಯ ತಿಳಿಸಿದ್ದಾರೆ.

ಮಾವುತರು ಮತ್ತು ಕಾವಾಡಿಗರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿ ಕಾರ್ಯಕ್ರಮದ ಯಶಸ್ವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಈ ಸಮಯದಲ್ಲಿ ಮಾವುತರ ಅಗತ್ಯಗಳನ್ನು ಜಿಲ್ಲಾಡಳಿತವೇ ಪೂರೈಸುತ್ತಿದೆ. ಜೊತೆಗೆ ಗೌರವಧನವನ್ನು 2,500 ರೂಗಳಷ್ಟು ಹೆಚ್ಚಿಸಲಾಗಿದೆ. ಕಳೆದ 5 ವರ್ಷಗಳಲ್ಲಿ ದಸರಾ ಕಾರ್ಯಕ್ರಮಗಳನ್ನು ಮುಗಿಸಿ ವಾಪಸ್‍ ಹೊರಡುವ ವೇಳೆ ಮಾವುತರಿಗೆ 5 ಸಾವಿರ ರೂಪಾಯಿಗಳ ಗೌರವ ಧನ ನೀಡಲಾಗುತ್ತಿತ್ತು.

ಸರ್ಕಾರದ ಈ ನಿರ್ಧಾರ ಮಾವುತರಲ್ಲಿ ತುಸು ಖುಷಿ ತಂದಿದೆ. ಆದರೆ, ನಗರದ ಜೀವನವೆಚ್ಚ ಹೆಚ್ಚಾಗಿದ್ದು, ಪ್ರತಿವರ್ಷ 10 ಸಾವಿರ  ರೂ ನೀಡಬೇಕೆಂದು ಮಾವುತರು ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದರು.

Leave a Reply

comments

Related Articles

error: