ಮೈಸೂರು

ಅಪಘಾತ: ಬೈಕ್ ಸವಾರ ಸಾವು

ಮೈಸೂರು,(ಎಚ್.ಡಿ.ಕೋಟೆ),ಜೂ.24-ಬೈಕ್ ಮತ್ತು ಟಾಟಾ ಎಸಿ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಎಚ್.ಡಿ.ಕೋಟೆ ತಾಲೂಕಿನ ಕೋಡಿ ಅರಳಿಮರ ಬಳಿ ನಡೆದಿದೆ.

ಬೆಟ್ಟಪ್ಪ (32) ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿ. ಹಿಂಬದಿಯಲ್ಲಿ ಕುಳಿತಿದ್ದ ವಿಶಾಲಮ್ಮ ಅವರ ಕೈಮೂಳೆ ಮುರಿದಿದೆ. ಗಾಯಾಳುವನ್ನು ಜಿಲ್ಲಾಸ್ಪತ್ರೆಗೆ ಹೋಗಲು ಬಿಡದೆ ಮೃತನ ಸಂಬಂಧಿಕರು ಟಾಟಾ ಎಸಿ ಚಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ಕುರಿತು ಎಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ವರದಿ-ಎಸ್.ಎನ್, ಎಂ.ಎನ್)

 

 

Leave a Reply

comments

Related Articles

error: