ಕರ್ನಾಟಕಪ್ರಮುಖ ಸುದ್ದಿ

ಜೂ.27 ರಂದು ಜಿಎಸ್‍ಟಿ ಜಾರಿಯಿಂದ ಚಲನಚಿತ್ರೋದ್ಯಮದ ಮೇಲಿನ ಪರಿಣಾಮ ಕುರಿತು ವಿಶ್ಲೇಷಣೆ

ಬೆಂಗಳೂರು, ಜೂನ್ 24: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ವಾಣಿಜ್ಯ ತೆರಿಗೆ ಇಲಾಖೆ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆ – ಎಫ್.ಕೆ.ಸಿ.ಸಿ.ಐ ವತಿಯಿಂದ “ಜಿ.ಎಸ್.ಟಿ. ಮತ್ತು ಚಲನಚಿತ್ರೋದ್ಯಮ: ಒಂದು ವಿಶ್ಲೇಷಣೆ” ಕಾರ್ಯಕ್ರಮ ಏರ್ಪಡಿಸಿವೆ.

ಕಾರ್ಯಕ್ರಮ ಜೂನ್ 27 ರಂದು ಬೆಳಿಗ್ಗೆ 10.30 ಗಂಟೆಗೆ ಮಹದೇವ ದೇಸಾಯಿ ಸಭಾಂಗಣ, ಗಾಂಧಿ ಭವನ, ಕುಮಾರ ಪಾರ್ಕ್ ರಸ್ತೆ, ಬೆಂಗಳೂರು ಇಲ್ಲಿ ನಡೆಯಲಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕ ಎನ್.ಆರ್. ವಿಶುಕುಮಾರ್ ಅವರು ಪ್ರಾಸ್ತಾವಿಕ ನುಡಿಯುವರು. ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಎಸ್.ವಿ. ರಾಜೇಂದ್ರಸಿಂಗ್ ಬಾಬು ವಹಿಸುವರು.

ಬಿ.ಟಿ. ಮನೋಹರ್, ಅಧ್ಯಕ್ಷರು, ರಾಜ್ಯ ತೆರಿಗೆ ಸಮಿತಿ ಹಾಗೂ ಟೀಮ್ ಜಿ.ಎಸ್.ಟಿ. ಎಫ್.ಕೆ.ಸಿ.ಸಿ.ಐ.  ಅವರು ವಿಷಯ ಪ್ರವೇಶ ನುಡಿಯುವರು.  ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸಾ.ರಾ. ಗೋವಿಂದು ಅವರು ಚಿತ್ರೋದ್ಯಮದ ದೃಷ್ಠಿಯಲ್ಲಿ ಜಿ.ಎಸ್.ಟಿ. ಕುರಿತು ಮಾತನಾಡುವರು.

ಕಾರ್ಯಕ್ರಮದ ವಿಶ್ಲೇಷಣೆಯನ್ನು  ವಾಣಿಜ್ಯ ತೆರಿಗೆ ಇಲಾಖೆಯ ಜಂಟಿ ಆಯುಕ್ತ ಕೆ.ಎಸ್. ಬಸವರಾಜ್, ಡಾ: ಬಿ.ವಿ. ಮುರಳಿಕೃಷ್ಣ, ಕೆ. ರಾಮನ್, ವಿಷಯ ತಜ್ಞರು ಹಾಗೂ ಚಾರ್ಟರ್ಡ್ ಅಕೌಂಟೆಂಟ್ ವಿವೇಕ್ ಮಲ್ಯ ಅವರು ಮಾಡುವರು. ಸಮಾರಂಭದಲ್ಲಿ ಕರ್ನಾಟಕ ಚಲನಚಿತ್ರ ನಿರ್ಮಾಪಕರ, ನಿರ್ದೇಶಕರ ಕಲಾವಿದರ ಸಂಘಗಳು ಭಾಗವಹಿಸಲಿವೆ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ರಿಜಿಸ್ಟ್ರಾರ್ ಹೆಚ್.ಬಿ. ದಿನೇಶ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

-ಎನ್.ಬಿ.

Leave a Reply

comments

Related Articles

error: