ಸುದ್ದಿ ಸಂಕ್ಷಿಪ್ತ

ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿರುವ ರೈತರ ಸಾಲ ಮನ್ನಾ : ಕೇಂದ್ರಕ್ಕೆ ಒತ್ತಾಯ

ಮೈಸೂರು.ಜೂ.24 : ಸರ್ಕಾರವೂ ರೈತರ ಸಾಲ ಮನ್ನಾ ಮಾಡಿರುವ ಕ್ರಮವನ್ನು ಕರ್ನಾಟಕ ಪ್ರಜಾ ಪಾರ್ಟಿ ಸ್ವಾಗತಿಸಿ ಸಿಎಂ ಸಿದ್ದರಾಮಯ್ಯನವರಿಗೆ ಅಭಿನಂದಿಸಿದೆ.

2012ರಿಂದ ನಿರಂತರ ಬರ, ಬೆಳೆ ನಷ್ಟರಿಂದ ರೈತರೂ ಹತಾಶರಾಗಿ ಆತ್ಮಹತ್ಯೆ ಸುಳಿಗೆ ಸಿಲುಕುತ್ತಿದ್ದು ಸಾಲ ಮನ್ನಾ ಮಾಡುವ ಮೂಲಕ ಮುಖ್ಯಮಂತ್ರಿಗಳು ರೈತರ ಬೆಂಬಲಕ್ಕೆ ನಿಂತಿರುವುದು ಶ್ಲಾಘನೀಯ ಇದರಂತೆ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿರುವ ಕೃಷಿ ಸಾಲವನ್ನು ಕೇಂದ್ರ ಸರ್ಕಾರ ಮನ್ನಾ ಮಾಡಬೇಕು, ಈ ನಿಟ್ಟಿನಲ್ಲಿ ಸಂಸತ್ ನಲ್ಲಿ ರಾಜ್ಯದ ಸಂಸದರು ಹೋರಾಟ ನಡೆಸಬೇಕೆಂದು ರಾಜ್ಯಾದ್ಯಕ್ಷ ಬಿ.ಶಿವಣ್ಣ, ಸಂಚಾಲಕ ಕೆ.ನಿಂಗೇಗೌಡ ಹಾಗೂ ಕಾರ್ಯಾಧ್ಯಕ್ಷ ಆರ್.ವಿ.ದಿನೇಶ್ ಗೌಡ ಒತ್ತಾಯಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: